ದಾಂಡೇಲಿ : ಮಳೆಗಾಲ ಆರಂಭವಾಗುತ್ತಿದ್ದಂತೆಯೆ ಸಸಿಗಳನ್ನು ನೆಡುವ ಕಾರ್ಯ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಡಿ ದಾಂಡೇಲಿ ತಾಲ್ಲೂಕಿನ ಆಲೂರು ಗ್ರಾಮ ಪಂ ವ್ಯಾಪ್ತಿಯಡಿ ರಸ್ತೆ ಬದಿಯ ಅರಣ್ಯದಂಚಿನಲ್ಲಿ ಗಿಡಗಳನ್ನು ನೆಡುವ ನಿಟ್ಟಿನಲ್ಲಿ ಈಗಾಗಲೆ ಪೂರ್ವಭಾವಿ ಸಿದ್ಧತಾ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಗಿದೆ.
ಆಲೂರು ಗ್ರಾ.ಪಂಚಾಯ್ತಿಯ ಮೇಲುಸ್ತುವಾರಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಡೆಯುತ್ತಿದ್ದು, ಕೂಲಿ ಕಾರ್ಮಿಕರಾಗಿ ಸ್ಥಳೀಯರನ್ನು ಬಳಕೆ ಮಾಡಲಾಗುತ್ತಿದೆ. ಸ್ಥಳೀಯರಿಗೆ ಕೂಲಿಯೂ ಸಿಕ್ಕಿತು, ಅರಣ್ಯ ಇಲಾಖೆಗೂ ಗಿಡಗಳನ್ನು ನೆಡಲು ಅನುಕೂಲವೂ ಆದಂತಾಗಿದೆ.