ಜೋಯಿಡಾ : ತಾಲ್ಲೂಕಿನ ಶ್ರೀ.ಕ್ಷೇತ್ರ ಉಳವಿಯನ್ನು ಸಂಪರ್ಕಿಸುವ ಅವರ್ಲಿಯಲ್ಲಿ ಎರಡ್ಮೂರು ದಿನಗಳ ಹಿಂದೆ ಮುರಿದು ಬಿದ್ದ ಸೇತುವೆಯ ದುರಸ್ತಿ ಕಾರ್ಯಕ್ಕೆ ಇಂದು ಗುರುವಾರ ಚಾಲನೆಯನ್ನು ನೀಡಲಾಯ್ತು.
ಸೇತುವೆ ಮುರಿದ ಹಿನ್ನಲೆಯಲ್ಲಿ ಸ್ಥಳೀಯ ಜನರಿಗೆ ತೀವ್ರ ತೊಂದರೆಯಾಗುವುದನ್ನು ಗಮನಿಸಿದ ಶಾಸಕರಾದ ಆರ್.ವಿ.ದೇಶಪಾಂಡೆಯವರು ಸೇತುವೆಯನ್ನು ತ್ವರಿತವಾಗಿ ದುರಸ್ತಿ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶವನ್ನು ನೀಡಿದ್ದರು. ಅದರಂತೆ ಇಂದು ದುರಸ್ತಿ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯ್ತು.
ಈ ಸಂದರ್ಭದಲ್ಲಿ ನಂದಿಗದ್ದೆ ಗ್ರಾಮ ಪಂಚಾಯ್ತು ಅಧ್ಯಕ್ಷೆ ಸುಮನಾ ಗಿರೀಶ್ ಹರಿಜನ, ಉಪಾಧ್ಯಕ್ಷರಾದ ಅರುಣ್ ದೇಸಾಯಿ, ಉಳವಿ ಗ್ರಾಮ ಪಂಚಾಯ್ತು ಉಪಾಧ್ಯಕ್ಷರಾದ ಮಂಜುನಾಥ್ ಮೋಕಾಶಿ, ಪ್ರಮುಖರಾದ ಆರ್.ಎ.ಭಟ್, ಸದಾನಂದ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.