ಶಿಕ್ಷಕಿ ಪದ್ಮ ಎಸ್ ಇವರಿಗೆ ಬೀಳ್ಕೊಡುಗೆ


ಸಿದ್ದಾಪುರ: ತಾಲೂಕಿನ ಗವಿನಗುಡ್ಡ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಿದ್ದ ಶಿಕ್ಷಕಿ ಪದ್ಮ ಎಸ್ ಇವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕಿಯ ಸಾರ್ಥಕ ಸೇವೆಯನ್ನು ಎಲ್ಲರೂ ಸ್ಮರಿಸಿ ಮಾತನಾಡಿದರು. ಅಭಿನಂದನೆ ಸ್ವೀಕರಿಸಿದ ಪದ್ಮ ಎಸ್ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು ಜೊತೆಗೆ ಗವಿನಗುಡ್ಡ ಶಾಲೆಯಲ್ಲಿ ಕಳೆದ ದಿನಗಳು ಸಾಕಷ್ಟು ಅನುಭವ ಮತ್ತು ಸಂತೋಷ ನೀಡಿದೆ ಎಂದರು.ವೇದಿಕೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಅನಿತಾ ನಾಯ್ಕ, ಎಸ್.ಡಿ.ಎಂ. ಸಿ. ಪದಾಧಿಕಾರಿಗಳಾದ ನಿರಂಜನ ಹೆಗಡೆ, ಜಯಶೀಲ ನಾಯ್ಕ, ಸಿ. ಆರ್. ಪಿ ಗಣೇಶ ಕೊಡಿಯಾ,ಮುಖ್ಯಾದ್ಯಾಪಕ ಗುರುರಾಜ ನಾಯ್ಕ, ಸಹ ಶಿಕ್ಷಕ ಸತೀಶ ನಾಯ್ಕ, ಚೇತನಾ ನಾಯ್ಕ, ಕವಿತಾ ಮರಾಠಿ, ಜಲಜಾಕ್ಷಿ ನಾಯ್ಕ ಇದ್ದರು.