ಅಂಕೋಲಾ: ದಿನಕರ ದೇಸಾಯಿಯವರು ಶಾಲಾ ಕಾಲೇಜುಗಳನ್ನು ಹುಟ್ಟುಹಾಕದ್ದಿದ್ದರೆ ಅನೇಕರಿಗೆ ಇಂದು ಸಮಾಜದಲ್ಲಿ ಉದ್ಯೋಗ ಮತ್ತು ಗೌರವ ಸಿಗುತ್ತಿರಲಿಲ್ಲ. ದಿನಕರ ಆದರ್ಶ ಗುಣಗಳನ್ನು ಬಳಸಿಕೊಂಡು ಮುನ್ನಡೆಯುತ್ತಿರುವ ದಿನಕರ ವೇದಿಕೆಯು ಅತ್ಯಂತ ಶಿಸ್ತಿನ ಸಂಘಟನೆಯಾಗಿದ್ದು ಹೆಮ್ಮರವಾಗಿ ಬೆಳೆಯಲಿ ಎಂದು ಸಾಹಿತಿ ವಿಠ್ಠಲ ಗಾಂವಕರ ಹೇಳಿದರು.
ದಿನಕರರ ಜನ್ಮದಿನಾಚರಣೆಯ ನಿಮಿತ್ತ ದಿನಕರ ವೇದಿಕೆ ಹಮ್ಮಿಕೊಂಡಿರುವ ಕಾಯ೯ಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ತಾವು ಬರೆದು ಪ್ರಕಟಿಸಿದ ‘ನಮ್ಮ ದಿನಕರ ದೇಸಾಯಿ’ ಕೃತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಸಭಿಕರಿಗೆ ವಿತರಿಸಿದರು.
ವೇದಿಕೆಯ ಸದಸ್ಯರು ಹಾಗೂ ಸಾಹಿತಿಗಳಾದ ಸಾತು ಗೌಡ ರವರು ಹಾಲಕ್ಕಿ ಒಕ್ಕಲಿಗರ ಮೇಲೆ ರಚಿಸಿದ ಚುಟುಕುಗಳನ್ನು ವಾಚಿಸಿ ಎಲ್ಲರ ಮೆಚ್ಚುಗೆ ಪಡೆದರು.
ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕೇಣಿ, ದಿನಕರ ದೇಸಾಯಿಯವರು ಕಟ್ಟಿದ ಶಿಕ್ಷಣ ಸಂಸ್ಥೆಗಳು ಸಾವಿರಾರು ಜನರ ಬಾಳಿಗೆ ಬೆಳಕನ್ನು ನೀಡಿದಷ್ಟೇ ಅಲ್ಲ, ಸರಕಾರ ಇಂದು ಜಾರಿ ತರುತ್ತಿರುವ ಬಹುತೇಕ ಜನಪರ ಯೋಜನೆಗಳನ್ನು ಅಂದೇ ತಮ್ಮ ಸೇವಾ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿದ್ದರು ಎಂದು ತಿಳಿಸಿದರು.
ವೇದಿಕೆಯ ಕೋಶಾಧ್ಯಕ್ಷರಾದ ಸಂತೋಷ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಕಾರ್ಯದರ್ಶಿ ಸಂದೇಶ ಉಳ್ಳಿಕಾಶಿ ಕಾರ್ಯಕ್ರಮಕ್ಕೆ ಆಗಮಿಸಿದ ದಿನಕರ ಅಭಿಮಾನಿಗಳನ್ನು ಹೃತ್ಪೂರ್ವಕ ಸ್ವಾಗತಿಸಿದರು.
ವೇದಿಕೆಯ ಉಪಾಧ್ಯಕ್ಷರಾದ ನೇಮಸಿಂಗ ರಾಠೋಡ ವಂದಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಕರೀಂ ಶೇಖ್ ಕಮಲಾಕರ ಬೋರಕರ ಎಂ.ಎಚ್.ಗೌಡ,ನಾಗಾನಂದ ಬಂಟ, ಖೇಮು ಎಂ ನಾಯ್ಕ, ರಮಾನಂದ ನಾಯಕ, ಶ್ರೀಧರ ನಾಯ್ಕ, ಗಣಪತಿ ಟಿ. ನಾಯಕ, ರಫೀಕ್ ಶೇಖ್, ಶ್ರೀಮತಿ ಶೀಲಾ ಬಂಟ, ಡಾ. ಅರ್ಚನಾ ನಾಯಕ, ಬಿ. ಎಲ್. ಸಂಜೀವ ರಾವ್, ಶ್ರೀಮತಿ ಮಂಜುಳಾ ಬಂಟ, ವಿಕ್ರಾಂತ ಕೇಣಿ, ಗಿರೀಶ್ ಶೆಟ್ಟಿ, ವಿದ್ಯಾರ್ಥಿಗಳಾದ ಸುಜನ ಕೇಣಿ, ಕಿಶನ್ ಕೇಣಿಕರ, ನಿಹಾಲ ಬಂಟ, ಸುಜನ ಶೆಟ್ಟಿ ಮತ್ತಿತರು ಇದ್ದರು