ಧಾರ್ಮಿಕ ವೈಭವದಲ್ಲಿ ನೆರವೇರಿದ ಮರಬಳ್ಳಿ ಶ್ರೀ ವೀರವಿಠ್ಠಲ ಮುಖ್ಯಪ್ರಾಣ ದೇವಸ್ಥಾನದ 20ನೇ ಪುನಃ ಪ್ರತಿಷ್ಠಾಪನೆ ವರ್ಧಂತಿ

ಹೊನ್ನಾವರ:

ತಾಲೂಕಿನ ಮರಬಳ್ಳಿ ಶ್ರೀ ವೀರ ವಿಠ್ಠಲ ಮುಖ್ಯಪ್ರಾಣ ದೇವಸ್ಥಾನದ ಪುನಃ ಪ್ರತಿಷ್ಠಾಪನೆಯ 20ನೇ ವರ್ಧಂತಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ನಿಮಿತ್ತ ಶ್ರೀ ವೀರ ವಿಠ್ಠಲ ಮುಖ್ಯಪ್ರಾಣ ದೇವರಿಗೆ ಹೋಮ ಹವನಾದಿಗಳು, ವಿಶೇಷ ಅಭಿಷೇಕ, ಅರ್ಚನೆ, ಹಣ್ಣುಕಾಯಿ ಸೇವೆ, ಸತ್ಯನಾರಾಯಣ ಕಥೆ ಇತ್ಯಾದಿ ಸೇವೆಗಳು ನಡೆದವು. ಉತ್ಸವ ನಿಮಿತ್ತ ಶ್ರೀದೇವರಿಗೆ ವಿಶೇಷ ಪುಷ್ಪಾಲಂಕಾರ ಭಕ್ತರ ಕಣ್ಮನ ಸೆಳೆಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀದೇವರಿಗೆ ಬಂದ ಫಲಾವಳಿ ಸಾಮಾನು ಹರಾಜು ಕರೆಯಲಾಯಿತು. ನಂತರ ಮಹಾಮಂಗಳಾರತಿ ನಡೆದು ಪ್ರಸಾದ ವಿತರಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/JEfGfMSeGhQ?si=lDM4KY9HrqWgVEp4

ಈ ಕುರಿತು ದೇವಾಲಯದ ಪ್ರಧಾನ ಅರ್ಚಕ ವರದರಾಜ ಭಟ್ ಮಾತನಾಡಿ, ಇಲ್ಲಿ‌ ಬಂದ ಭಕ್ತರು ನಿಷ್ಕಲ್ಮಶ ರೀತಿಯಲ್ಲಿ ಶ್ರೀದೇವರಲ್ಲಿ ಬೇಡಿಕೊಂಡಾಗ ಬೇಡಿಕೆಗಳು ಈಡೇರಿದ ಉದಾಹರಣೆಗಳಿದೆ. ಶುಭಕಾರ್ಯ ಆಗಬೇಕಾದ ಪೂರ್ವದಲ್ಲಿ ಇಲ್ಲಿ ಪ್ರಸಾದ ಕೇಳಲಾಗುತ್ತದೆ. ನಾಡಿನ ನಾನಾ ಭಾಗದಿಂದ ಭಕ್ತರು ಆಗಮಿಸಿ ತನು-ಮನ-ಧನದಿಂದ ದೇವರಿಗೆ ಸೇವೆ ಸಲ್ಲಿಸುತ್ತಾರೆ.ತುಲಾಭಾರ ಸೇವೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ರಾಮತಾರಕ ಹವನ, ರಾಮರಕ್ಷಾ ಸ್ತೋತ್ರ, ಪವಮಾನ ಪಾರಾಯಣ ನಡೆಯಲಿದೆ. ಎಲ್ಲಾ ಭಕ್ತಾಧಿಗಳು ಇದೇ ರೀತಿ ಸೇವೆ ಸಲ್ಲಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಲಿ ಎಂದರು.

ಗಂಗೊಳ್ಳಿಯ ವೇಧಮೂರ್ತಿ ವೇಧವ್ಯಾಸ ಕೃಷ್ಣಾನಂದ ಆಚಾರ್ಯ ಮಾತನಾಡಿ, ಇಲ್ಲಿ ಕ್ಷೇತ್ರ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ಧರ್ಮದರ್ಶಿ ಮಂಡಳಿ ಇಲ್ಲ. ಹತ್ತು ಸಮಸ್ತರು ಇಲ್ಲ. ವೈದಿಕರಿಂದ ಈ ಪರಂಪರೆ ನಡೆದುಕೊಂಡು ಬರುತ್ತಿದೆ.ಕಷ್ಟ ಎಂದು ಬಂದವರಿಗೆ ಶ್ರೀಕ್ಷೇತ್ರದಲ್ಲಿ ಪರಿಹಾರ ಸಿಗುತ್ತದೆ, ನೆಮ್ಮದಿ ಪ್ರಾಪ್ತವಾಗುತ್ತದೆ. ದೇವರ ಮೇಲಿನ ನಂಬಿಕೆಯಿಂದ ಹೊರ ಜಿಲ್ಲೆಯಿಂದ ಇಲ್ಲಿಗೆ ಬಂದಿರುವೆ ಎಂದರು.

ಊರಿನ ಭಕ್ತರಾದ ನಿವೃತ್ತ ಶಿಕ್ಷಕ ಸತ್ಯಪ್ಪ ನಾಯ್ಕ ಮಾತನಾಡಿ, ನಾನು ಕಳೆದ 20ವರ್ಷದಿಂದಲು ದೇವಾಲಯಕ್ಕೆ ಭೇಟಿ ನೀಡುತ್ತಿದ್ದೇನೆ. ಬಹಳ ಶಕ್ತಿಯುತವಾದ ದೈವಿಕ ತಾಣ. ದೇವಾಲಯದ ಅರ್ಚಕರಾದ ವರದರಾಜ ಭಟ್ ಅವರು ಧಾರ್ಮಿಕವಾಗಿ ಕಾರ್ಯಕ್ರಮ ನಡೆಸುವ ಜತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕಳಕಳಿಯಿಂದ ತೊಡಗಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.ಶಾಲಾ ಮಕ್ಕಳಿಗಾಗಿ ಅನೇಕೆ ಕ್ರೀಡಾ ಕಾರ್ಯಕ್ರಮ ಹಮ್ಮಿಕೊಂಡು ಬಹುಮಾನ ವಿತರಿಸುತ್ತಾರೆ. ಇಲ್ಲಿನ ವ್ಯವಸ್ಥೆ ಅಚ್ಚುಕಟ್ಟಾಗಿದೆ ಎಂದರು.

ಸುರೇಶ್ ಹೊನ್ನಾವರ ಮಾತನಾಡಿ,ತುಂಬಾ ವರ್ಷದಿಂದ ಈ ದೇವಾಲಯಕ್ಕೆ ಭೇಟಿ ನೀಡಿದ್ದೇವೆ.ನಮ್ಮ ಹಲವಾರು ಕಷ್ಟ ಪರಿಹಾರವಾಗಿ ಜೀವನದಲ್ಲಿ ಒಳಿತನ್ನು ಕಂಡಿದ್ದೇವೆ. ವರ್ಧಂತಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ ಎಂದರು.

ರಾಜೇಶ್ವರಿ ಭಟ್ಟ ಮಾತನಾಡಿ,ನಾನು ಸಣ್ಣವಳಿದ್ದಾಗ ಇಲ್ಲಿ ಚಿಕ್ಕ ದೇವಾಲಯವಿತ್ತು.ಊರಿನ ಹಾಗೂ ಪರ ಊರಿನ ಭಕ್ತರು ತಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರು ಇಲ್ಲಿಗೆ ಬರುತ್ತಿದ್ದರು‌. ತಮ್ಮ ತಂದೆಯವರಾದ ವಾಮನ ಭಟ್ ಅವರಿಂದ ಪ್ರಸಾದ ಪಡೆದು ತೆರಳುತ್ತಿದ್ದರು. ನಂತರದ ದಿನಗಳಲ್ಲಿ ದೊಡ್ಡ ದೇವಾಲಯವಾಗಿ ಪುನಃ ಪ್ರತಿಷ್ಠಾಪನೆ ಆಯಿತು.ಇಲ್ಲಿ ಜಾತಕ ಅಥವಾ ಜ್ಯೋತಿಷ್ಯ ನೋಡುವುದು ಪ್ರಚಾರವಾಯಿತು.ರಾಜ್ಯ,ಹೊರರಾಜ್ಯದಿಂದ ಭಕ್ತರು ಆಗಮಿಸುತ್ತಿದ್ದಾರೆ ಎಂದರು.

ಒಟ್ಟಿನಲ್ಲಿ ಶ್ರೀ ವೀರ ವಿಠ್ಠಲ ಮುಖ್ಯಪ್ರಾಣ ದೇವಸ್ಥಾನದ ಪುನಃ ಪ್ರತಿಷ್ಠಾಪನೆಯ ವರ್ಧಂತಿ ಉತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ‌ಪಡೆದು ಕೃತಾರ್ಥರಾದರು.

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/JEfGfMSeGhQ?si=lDM4KY9HrqWgVEp4