ಹೊನ್ನಾವರ ತಾಲೂಕಿನಾದ್ಯಂತ ಅರಣ್ಯವಾಸಿಗಳ ಮೇಲೆ ಕಿರುಕುಳ- ವಿನಾಕಾರಣ ಕಾನೂನು ಬಾಹಿರವಾಗಿ ಕಿರುಕುಳ ನೀಡುತ್ತಿರುವುದು ಖಂಡನಾರ್ಹ ಅಧ್ಯಕ್ಷ ರವೀಂದ್ರ ನಾಯ್ಕ


ಹೊನ್ನಾವರ:- ತಾಲೂಕಿನಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ಅಲ್ಲಲ್ಲಿ ಅರಣ್ಯವಾಸಿಗಳಿಗೆ ಕಿರುಕುಳ ಹಾಗೂ ದೌರ್ಜನ್ಯ ಎಸುಗುತ್ತಿರುವ ಬಗ್ಗೆ ಅರಣ್ಯವಾಸಿಗಳು ದಾಖಲೆ ಸಹಿತ ಮಾಹಿತಿ ನೀಡದ್ದು, ಈ ಬಗ್ಗೆ ಅರಣ್ಯ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ವಿಚಾರಣೆ ಇರುವಂತಹ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ನೋಟಿಸ್‌ ನೀಡದೇ, ದಾಖಲೆ ಪರಿಶಿಲಿಸದೇ, ಅವಕಾಶಗಳನ್ನು ನೀಡದೇ, ಏಕಾಏಕಿಯಾಗಿ ಅರಣ್ಯವಾಸಿಗಳ ಅತಿಕ್ರಮಣ ಕ್ಷೇತ್ರದಲ್ಲಿ ಅರಣ್ಯವಾಸಿಗಳು ಬೆಳೆಸಿರುವಂತಹ ಗಿಡ ಮರಗಳನ್ನ ಕಡಿದು ಧ್ವಂಸಗೊಳಿಸುತ್ತಿರುವ ಅರಣ್ಯ ಸಿಬ್ಬಂದಿಗಳ ಮನೋಪ್ರವೃತ್ತಿ ಖಂಡನಾರ್ಹ ಎಂದು ಹೇಳಿದ್ರು.


ಅಸಮರ್ಪಕ ಜಿಪಿಎಸ್ ಮಾನದಂಡದಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಗಡಿಯನ್ನ ಅರಣ್ಯ ಸಿಬ್ಬಂದಿಗಳು ಗುರುತಿಸುತ್ತಿರುವುದು ಹಾಗೂ ಒಕ್ಕಲೆಬ್ಬಿಸುತ್ತಿರುವುದು ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿರುತ್ತೆ. ತಾಲೂಕಿನ ಚಿಕ್ಕಕೋಡ್ ಗ್ರಾ.ಪಂ ವ್ಯಾಪ್ತಿಯ ನಿವಾಸಿ ಈಶ್ವರ ಗೌಡ ಹಾಗೂ ಮಾಗೋಡ ಗ್ರಾ.ಪಂ ವ್ಯಾಪ್ತಿಯ ನಿವಾಸಿ ರಾಮ ಪಕ್ಯ ಮರಾಠಿ, ಮತ್ತು ಮಂಜುನಾಥ ನಾಯ್ಕ ಮುಂತಾದ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು..

ಆರ್ಥಿಕವಾಗಿ ಬಲಿಷ್ಟವಾಗಿರುವಂತಹ ಅರಣ್ಯವಾಸಿಗಳಿಗೆ ವಿಶೇಷ ಸೌಲಭ್ಯಗಳು ನೀಡುವ ಅರಣ್ಯ ಸಿಬ್ಬಂದಿಗಳು, ಬಡ ಅನಕ್ಷರಸ್ಥ ಅರಣ್ಯವಾಸಿಗಳಿಗೆ ವಿನಾ ಕಾರಣ ಕಾನೂನು ಬಾಹಿರವಾಗಿ ಕಿರುಕುಳ ಜರುಗಿಸುತ್ತಿರುವುದು ಖಂಡನಾರ್ಹ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಸಿಬ್ಬಂದಿಗಳ ಕ್ರಮವನ್ನು ಟೀಕಿಸಿದ್ದಾರೆ.

ನಾಗರಾಜ ನಾಯ್ಕ ನುಡಿಸಿರಿ ನ್ಯೂಸ್, ಹೊನ್ನಾವರ