ಶರಾವತಿ ಹಿನ್ನೀರಿನಲ್ಲಿ ಅತಿವೇಗವಾಗಿ ಧಾವಿಸಿದ ಬೋಟ್-ದೋಣಿ ಮುಗುಚಿ ನದಿಯಲ್ಲಿ ಮುಳುಗಿದ ಬಾಲಕಿ

ಹೊನ್ನಾವರ: ತಾಲೂಕಿನ ತನ್ಮಡಗಿಯ ಸಮೀಪ ಶರಾವತಿ ಹಿನ್ನೀರಿನಲ್ಲಿ ಏಕಾಎಕಿ ಅತಿವೇಗವಾಗಿ ಫೋಟೋ,ವಿಡಿಯೋ ಶೂಟ್ ನಡೆಸುವ ಎರಡೆರಡು ಬೋಟ್ ಧಾವಿಸಿದ್ದರಿಂದ ತೆರೆ ಅಪ್ಪಳಿಸಿ ದೋಣಿ ಮಗುಚಿದ್ದು ಪರಿಣಾಮ ಬಾಲಕಿಯೊರ್ವಳು ನದಿಯಲ್ಲಿ ಮುಳುಗಿದ್ದು,ಅದ್ರಷ್ಟವಷಾತ್ ಪ್ರಾಣಾಪಯದಿಂದ ಪಾರಾದ ಘಟನೆ ನಡೆದಿದೆ.

ತನ್ಮಡಗಿ ನಿವಾಸಿ ವೃತ್ತಿಯಲ್ಲಿ ಮೀನುಗಾರಳಾಗಿರುವ ಮೋಹಿನಿ ವೆಂಕಟೇಶ ಅಂಬಿಗ ತಮ್ಮ ನಾಲ್ಕುವರೆ ವರ್ಷದ ಮಗಳಾದ ದಿಶಾಳನ್ನು ಕುಳ್ಳಿರಿಸಿಕೊಂಡು ತಾವೆ ದೋಣಿ ಚಲಾಯಿಸಿಕೊಂಡು ನದಿ ದಾಟಲು ಸಜ್ಜಾಗಿದ್ದರು. ಈ ವೇಳೆ ದೋಣಿಯಲ್ಲಿದ್ದ ನೀರನ್ನು ಕ್ಲಿನ್ ಮಾಡುತ್ತಿರುವಾಗ ಏಕಾಎಕಿ ಫೋಟೋ,ವಿಡಿಯೋ ಶೂಟ್ ನಡೆಸುವ ಎರಡೆರಡು ಬೋಟ್ ನದಿಯಲ್ಲಿ ಬಂದಿದೆ. ತೆರೆ ಅಪ್ಪಳಿಸಿ ದೊಣಿಯಲಿದ್ದ ಮಗು ನದಿಗೆ ಬಿದ್ದಿದೆ.ತಾಯಿ ಜೋರಾಗಿ ಕಿರುಚುಕೊಂಡಿದ್ದಾಳೆ.ತಕ್ಷಣವೇ ಸ್ಥಳೀಯರು ಧಾವಿಸಿ ನದಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿದ್ದಾರೆ.ಆದರೆ ಅದಾಗಲೇ ಹೊಟ್ಟೆಗೆ ನೀರು ಸೇರಿ‌ ಉಸಿರಾಟದಲ್ಲಿ ಏರುಪೇರಾಗಿತ್ತು. ತಕ್ಷಣವೇ ಸ್ಥಳೀಯರ ಸಹಕಾರದಿಂದ ಹೊನ್ನಾವರ ತಾಲೂಕಾಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಅದ್ರಷ್ಟವಷಾತ್ ಪ್ರಾಣಾಪಾಯದಿಂದ ಮಗು ಪಾರಾಗಿದ್ದಾಳೆ. ಮಗುವಿನ ತಾಯಿ ಮೋಹಿನಿ ವೆಂಕಟೇಶ ಅಂಬಿಗ ಘಟನೆ ಕುರಿತು ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿದರು.

ಇನ್ನೂ ಈ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಹಾಗೂ ಪ್ರವಾಸೋದ್ಯಮದ ಹೆಸರಲ್ಲಿ ನಡೆಯುವ ಬೋಟಿಂಗ್ ನಿಂದ ತಮ್ಮ ಮಗಳ ಪ್ರಾಣಕ್ಕೆ ಕುತ್ತುಂಟಾಗುವ ಹಂತದಲ್ಲಿತ್ತು.ಬೋಟಿಂಗ್ ನಡೆಸುವವರ ಯುನಿಯನ್ ಅಧ್ಯಕ್ಷರಿಗೆ ಈ ಬಗ್ಗೆ ಪ್ರಶ್ನಿಸಿದರೆ ತಮಗೆ ಯಾವ ಬೋಟ್ ನವರು ಎನ್ನುವುದು ಗೊತ್ತಿಲ್ಲ ಎನ್ನುತ್ತಾರೆ.ಮಾನವೀಯತೆ ಇಂದ ಮಗುವನ್ನು ನೋಡಲು ಆಸ್ಪತ್ರೆಗೆ ಯಾರೊಬ್ಬ ಬೋಟಿಂಗ್ ನವರು ಬಂದಿಲ್ಲ. ಒಂದೇ ಬಾರಿ ಎಂಟತ್ತು ಬೋಟ್ ತರುತ್ತಾರೆ. ನದಿತಟದ ಜಮೀನಿನ ಬೇಲಿಗು ಹಾನಿಯಾಗುತ್ತಿದೆ. ಬೋಟಿಂಗ್ ನಿಂದ ಹಿಂದೆಯು ಇಂತಹ ಅವಘಡ ನಡೆದಿತ್ತು.ಇದರಿಂದ ಮೀನುಗಾರಿಕೆಗು ತೊಂದರೆಯಾಗುತ್ತದೆ.ಮೀನಿಗೆ ಹಾಕಿದ ಬಲೆ ಬಿಡಿಸಲು ಕೊಡುವುದಿಲ್ಲ‌.ಇದರಿಂದ ಮೀನುಗಾರಿಕೆ ನಡೆಸದಂತಾಗಿದೆ. ಬೋಟಿಂಗ್ ಆರಂಭಿಸುವ ಪೂರ್ವದಲ್ಲಿ ಎಸಿಯವರು ನೈಜ ಮೀನುಗಾರರನ್ನು ಸಭೆಗೆ ಕರೆಸದೆ ಸಾಧಕ-ಭಾದಕ ಚರ್ಚಿಸದೆ ಬೋಟಿಂಗ್ ಗೆ ಅನುಮತಿ ನೀಡಿದ್ದಾರೆ. ಸಚಿವ ಮಂಕಾಳ ವೈದ್ಯ ಅವರು ಇದರ ಬಗ್ಗೆ ಹೆಚ್ಚಿನಮುತುವರ್ಜಿ ವಹಿಸಿ ಅಪಾಯಕಾರಿಯಾಗಿರುವ ಈ ಬೋಟಿಂಗ್ ನಿಲ್ಲಿಸಬೇಕು ಎಂದು ಮಗುವಿನ ತಂದೆ ವೆಂಕಟೇಶ ಅಂಬಿಗ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೈಟ್2:ವೆಂಕಟೇಶ ಅಂಬಿಗ

ಈ ಹಿಂದೆಯು ಬೋಟಿಂಗ್ ನ ಅಬ್ಬರಕ್ಕೆ ನಾಡದೋಣಿ ಮುಳುಗಿ ಯುವಕ ಸಾವನ್ನಪ್ಪಿದ್ದ. ಬೋಟಿಂಗ್ ನವರ ಮೇಲೆ ಪ್ರಕರಣವು ದಾಖಲಾಗಿತ್ತು. ಘಟನೆಗೆ ಇದೆ ಪ್ರೀ ವೆಡ್ಡಿಂಗ್ ಬೋಟ್ ರಗಳೆ ಕಾರಣ ಎಂದು ಸ್ಥಳೀಯವಾಗಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಬೋಟ್ ವೇಗಕ್ಕೆ ನದಿಯಲ್ಲಿ ಸಂಚರಿಸುವ ಸಣ್ಣ ಪುಟ್ಟ ದೋಣಿಗೆ ಪಲ್ಟಿ ಯಾಗುವ ಭಯ ಕಾಡುತ್ತಿದೆ‌.ಶರಾವತಿ ನದಿಯಲ್ಲಿ ಪ್ರವಾಸಿ ಬೋಟ್ ವಿಚಾರಕ್ಕೆ ಅನುಮತಿ ನೀಡಬಾರದೆನ್ನುವ ಆಗ್ರಹ ತನ್ಮಡಗಿ ನಾಡದೋಣಿ ಮೀನುಗಾರರಿಂದ ವ್ಯಕ್ತವಾಗಿ,ತಹಶೀಲ್ದಾರರಿಗೆ ಈ ಹಿಂದೆ ಮನವಿ ಕೂಡ ಸಲ್ಲಿಸಿದ್ದರು.

ಒಟ್ಟಿನಲ್ಲಿ ಪಟ್ಟಣದ ಬಿಕಾಶಿ ತಾರಿ ಮೂಲಕ ಶರಾವತಿ ನದಿಯಲ್ಲಿ ಪ್ರವಾಸೋದ್ಯಮ ಮತ್ತು ಉದ್ಯೋಗದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಬೋಟಿಂಗ್ ದಂದೆಗೆ ಕಡಿವಾಣ ಹಾಕಲು ಆಕ್ರೋಶ ವ್ಯಕ್ತವಾಗಿದೆ.