ಅಂಕೋಲಾ: ಇಲ್ಲಿನ ಬೆಳಸೆ ನಂ 2 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಿರಂತರವಾಗಿ ಹಲವು ವರ್ಷಗಳಿಂದ ಸ್ಕೂಲಬ್ಯಾಗ್, ಛತ್ರಿ, ಶಾಲೆಗೆ ಕಪಾಟು, ಕುರ್ಚಿ ಸೇರಿದಂತೆ ಹಲವು ಪರಿಕರಗಳನ್ನು ತಮ್ಮ ತಂದೆಯ ನೆನಪಿನಲ್ಲಿ ನೀಡುತ್ತಲೇ ಬಂದಿರುವ ದಾನಿ ರಫೀಕ್ ಷೇಕ್ ಹಾಗೂ ರೂಬಿ ಷೇಕ್ ದಂಪತಿಗಳು ಅಂಕೋಲಾ (ದುಬೈ) ಅವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾಲೆಗೆ ಭೇಟಿ ನೀಡಿ ತಮಗೆ ವಿದ್ಯಾರ್ಜನೆ ಮಾಡಿದ ಶಿಕ್ಷಕರ ನೆನಪಿನಲ್ಲಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಿದರು.
ಶಾಲೆಯ ಶಿಕ್ಷಕಿ, ಖ್ಯಾತ ಬರಹಗಾರ್ತಿ ರೇಣುಕಾ ರಮಾನಂದ, ಶಿಕ್ಷಕಿ ಸವಿತಾ ಗುನಗಾ, ಅಡುಗೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಸನ್ಮಾನ ಸ್ವೀಕರಿಸಿದರು.
ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನಾ ಅವಧಿಯಲ್ಲಿ ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಿ ರಫೀಕ್ ಶೇಕ್ ದಂಪತಿಗಳು ಸಂಭ್ರಮಿಸಿದರು. ನಂತರ ವಿದ್ಯಾರ್ಥಿಗಳಿಗೆ ಶಿಕ್ಷಕ ದಿನಾಚರಣೆಯ ಮಹತ್ವ, ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಕುರಿತಾಗಿ ತಿಳಿಸಿದರು. ಶಾಲೆಯ ಮತ್ತು ವಿದ್ಯಾರ್ಥಿಗಳ ಪರವಾಗಿ ಶಿಕ್ಷಕರು ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು