ಅಂಕೋಲಾ: ದಿನಕರ ದೇಸಾಯಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಯ ಹರಿಕಾರರಾಗಿದ್ದು, ಅನೇಕರ ಬಾಳಿಗೆ ಬೆಳಕಾಗಿ ದಾರಿ ತೋರಿಸಿದ ಅವರನ್ನು ಜನರು ಸದಾ ಸ್ಮರಿಸಬೇಕಿದೆಡಾ. ಆರ್.ಜಿ.ಗುಂದಿ

ಅಂಕೋಲಾ: ದಿನಕರ ದೇಸಾಯಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಯ ಹರಿಕಾರರಾಗಿದ್ದು, ಅನೇಕರ ಬಾಳಿಗೆ ಬೆಳಕಾಗಿ ದಾರಿ ತೋರಿಸಿದ ಅವರನ್ನು ಜನರು ಸದಾ ಸ್ಮರಿಸಬೇಕಿದೆ ಎಂದು ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಆರ್.ಜಿ.ಗುಂದಿ ಹೇಳಿದರು.

ಬೆಳಂಬಾರದ ಶ್ರೀ ಮಂಜುನಾಥ ಸ್ವಾಮಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ದಿನಕರ ಮಾಸಾಚರಣೆ ಕುರಿತು ಆಯೋಜಿಸಿದ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕ ಉಲ್ಲಾಸ ಹುದ್ದಾರ ದೇಸಾಯಿಯವರ ನಾ ಕಂಡ ಪಡುವಣ ಪ್ರವಾಸದ ಕಥನದ ಹೂರಣವನ್ನು ಸ್ವಾರಸ್ಯಕರವಾಗಿ ಮಂಡಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಾಧ್ಯಾಪಕಿ ಮೀರಾ ನಾಯಕ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಪ್ರತಿಷ್ಠಾನದ ಧೈಯೋದ್ದೇಶಗಳನ್ನು ವಿವರಿಸಿದರು. ಸದಸ್ಯ ಜೆ.ಪ್ರೇಮಾನಂದ, ಶಿಕ್ಷಕಿ ವೀಣಾ ನಾಯಕ ಉಪಸ್ಥಿತರಿದ್ದರು. ರಾಘವೇಂದ್ರ ಭಟ್, ಜಗದೀಶ ಗೌಡ ನಿರ್ವಹಿಸಿದರು