ಹೊನ್ನಾವರ : ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.ಪುಟಾಣಿ ವಿದ್ಯಾರ್ಥಿಗಳು ‘ಕೃಷ್ಣ’ ಮತ್ತು ‘ರಾಧಾ’ ವೇಷ ಧರಿಸಿ ಬಂದು ಜನ್ಮಾಷ್ಟಮಿಯ ವಿವಿಧ ಹಾಡುಗಳಲ್ಲಿ ಕುಣಿದು ಕುಪ್ಪಳಿಸಿದರು.
ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಜಯಂತಿ ಎಂದೂ ಕರೆಯಲಾಗುತ್ತದೆ, ಇದು ಕೃಷ್ಣನ ಜನ್ಮದಿನವನ್ನು ಸೂಚಿಸುತ್ತದೆ, ಅಂದರೆ ವಿಷ್ಣುವಿನ ಎಂಟನೇ ಅವತಾರ. ಈ ಹಬ್ಬವನ್ನು ಅದ್ಧೂರಿಯಾಗಿ ಎಲ್ಲ ಕಡೆ ಆಚರಣೆ ಮಾಡುತ್ತಾರೆ ಕೃಷ್ಣ ಹುಟ್ಟಿದ ಮಥುರಾ ಮತ್ತು ವೃಂದಾವನ ನಗರಗಳಲ್ಲಿ ಇದನ್ನು ಇನ್ನೂ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಕೃಷ್ಣ ಇಲ್ಲಿ ಜನಿಸಿದ್ದು ಎನ್ನುವ ಅನೇಕ ಪುರಾಣ ಕಥೆಗಳು ಇದೆ. ಕಷ್ಣಾಷ್ಟಮಿ ನಿಮಿತ್ತ ಚಿಕ್ಕ ಮಕ್ಕಳಿಗೆ ಕೃಷ್ಣನ ವೇಷ ಧರಿಸಿ,ಪಾಲಕ-ಪೋಷಕರು ಸಂಭ್ರಮಿಸುತ್ತಾರೆ.ಇನ್ನು, ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಗೋಪಿಕೆಯರ ಮಧ್ಯೆ ಬೆಣ್ಣೆ ಕೃಷ್ಣ ಇರುವ ದ್ರಶ್ಯ ಕಂಡುಬಂತು.