ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕರ ಗೌರವ ಸಮರ್ಪಣೆ

ದಾಂಡೇಲಿ : ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ‌ ನಿಮಿತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಆನಂತರ ಶಾಲಾ ವಿದ್ಯಾರ್ಥಿಗಳಿಂದ ಮತ್ತು ವಿದ್ಯಾರ್ಥಿಗಳ ಪಾಲಕರ ವತಿಯಿಂದ ಶಾಲೆಯ ಶಿಕ್ಷಕ ವೃಂದದವರಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಸೆಲ್ವಿಯವರು ನಿಮ್ಮೆಲ್ಲರ ಪ್ರೀತಿಯ ಗೌರವ ಅಭಿಮಾನ ನಮ್ಮೆಲ್ಲ ಶಿಕ್ಷಕರಿಗೆ ಮತ್ತಷ್ಟು ಶೈಕ್ಷಣಿಕ ಸೇವೆಯನ್ನು ನೀಡಲು ಶಕ್ತಿ ತುಂಬಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ರಿಯಾಜ ಸೈಯದ್, ಗುರು ಮಠಪತಿ, ಜಾಕ್ ಫರ್ನಾಂಡಿಸ್, ನೆಲ್ಸನ್ ಬಾಬು, ಡೈನಾ, ಶೋಭಾ ರಾಥೋಡ್, ರೇಷ್ಮಾ ಕುಮಾರ್, ಫಿಲೋಮಿನಾ, ನುಸರತ್, ನಿರ್ಮಲಾ ದಂಡಗಲ್, ನೀಲಾಲೋಚನ, ರಾಹುಲ್ ಬಾವಾಜಿ ಶಾಲೆಯ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಶಿಕ್ಷಕರು, ಶಾಲೆಯ ಸಿಬ್ಬಂದಿ ವರ್ಗದವರು,ವಿದ್ಯಾರ್ಥಿಗಳು, ಮತ್ತು ಪಾಲಕರು ಉಪಸ್ಥಿತರಿದ್ದರು.