ದಾಂಡೇಲಿ : ಬಹು ನಿರೀಕ್ಷಕತ ಹಾಗೂ ಅತೀ ಅವಶ್ಯವಾಗಿದ್ದ ಹೆಸ್ಕಾಂ ದಾಂಡೇಲಿ ವಿಭಾಗೀಯ ಕಾರ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ನಗರದ ಕೆ.ಸಿ.ವೃತ್ತದ ಹತ್ತಿರವಿರುವ ಹೆಸ್ಕಾಂ ಉಪ ವಿಭಾಗೀಯ ಕಚೇರಿಯ ಆವರಣದ ಪಕ್ಕದಲ್ಲೆ ಹೆಸ್ಕಾಂ ದಾಂಡೇಲಿ ವಿಭಾಗೀಯ ಕಾರ್ಯಾಲಯದ ಕಟ್ಟಡ ನಿರ್ಮಾಣವಾಗುತ್ತಿದೆ.
ಸಧ್ಯಕ್ಕೆ ಹೆಸ್ಕಾಂ ದಾಂಡೇಲಿ ವಿಭಾಗೀಯ ಕಾರ್ಯಾಲಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಡಿಸೆಂಬರ್ ಅಂತ್ಯದೊಳಗೆ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದು ಉದ್ಘಾಟನೆಯಾಗಬಹುದೆಂದು ಹೆಸ್ಕಾಂ ದಾಂಡೇಲಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ ಮಲ್ಯ ಅವರು ಮಾಧ್ಯಮಕ್ಕೆ ಬುಧವಾರ ಹೇಳಿದ್ದಾರೆ.