ಭಟ್ಕಳ: ಪುರವರ್ಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದನ್ನು ಕೈ ಬಿಡುವಂತೆ ಆಗ್ರಹಿಸಿ ಪುರವರ್ಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಹಾಗೂ ಆ ಭಾಗದ ಸಾರ್ವಜನಿಕರು ಯಲ್ವಡಿಕವೂರ ಗ್ರಾಮ ಪಂಚಾಯತಗೆ ಮುತ್ತಿಗೆ ಹಾಕಿ ಪಿ.ಡಿ.ಓ ಗೆ ಮನವಿ ಸಲ್ಲಿಸಿದ್ದು ಈ ವೇಳೆ ಪಿ.ಡಿ.ಓ ಹಾಗೂ ಸಾರ್ವಜನಿಕ ನಡುವೆ ಮಾತಿನ ಚಕಮಕಿ ಉಂಟಾಗಿರುವ ಘಟನೆ ನಡೆದಿದೆ.
ಶಾಲೆಯ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬರ್ 322 ರಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕ ವನ್ನು ಸ್ಥಾಪಿಸಲು ತಾವುಗಳು ಸದರಿ ಜಮೀನಿನ ಪೈಕಿ 0-20-0 ಕ್ಷೇತ್ರದ ಜಮೀನನ್ನು ಸದರಿ ಗ್ರಾಮ ಪಂಚಾಯತಿ ಹೆಸರಿಗೆ ಮಂಜೂರಿ ಮಾಡಿ ಅದೇಶ ಮಾಡಿರುತ್ತೀರಿ ಆದರೆ ಈ ಕುರಿತು ಪ್ರಸ್ತಾವನೆ ಬಂದ ಸಂದರ್ಭದಲ್ಲಿ ನಾವುಗಳು ತಮ್ಮ ಕಚೇರಿಗೆ ಬಂದು ನಮ್ಮ ಅಕ್ಷೇಪಣೆಯನ್ನು ಸಲ್ಲಿಸಿದ್ದಾಗಿಯೂ ಕೂಡ ನಮ್ಮ ಅಕ್ಷೇಪಣೆಯನ್ನು ಗಣನೆಗೆ ತೆಗೆದುಕೊಳ್ಳದೆ ಈ ಬಗ್ಗೆ ನಮ್ಮನ್ನು ವಿಚಾರಿಸದೆ, ನಮ್ಮ ಶಾಲೆಯ ಸುತ್ತಮುತ್ತ ಬಿಗಿ ಪರಿಸರ ವಾತಾವರಣ ಹಾಳಾಗುತ್ತಿದ್ದು ಮತ್ತು ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದು ಎಂದು ತಿಳಿಸಿದರು ಕೂಡ ಪಂಚಾಯತ ಏಕಾಏಕಿ ಮಂಜೂರಿ ಮಾಡಿರುವುದು ತಿಳಿದು ಬಂದಿರುತ್ತದೆ. ಶಾಲೆಯ ಸುತ್ತಮುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೆ ಯಾವುದೇ ಘನ ತ್ಯಾಜ್ಯ ಘಟಕವನ್ನು ನಿರ್ಮಿಸಬಾರದೆಂದು ಆದೇಶವಿದ್ದರೂ ಕೂಡ ಘಟಕವನ್ನು ಪ್ರಾರಂಭಿಸಲು ಹೊರಟಿರುವುದು ಸರಿಯಲ್ಲ ಇದು ಸಾರ್ವಜನಿಕರ ವಿರೋಧದ ಕಾಮಗಾರಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಸಂಯಮದಿಂದ ಉತ್ತರಿಸದೇ ಅವರೊಂದಿಗೆ ಮಾತಿಗಿಳಿದ ಪಂಚಾಯತ ಪಿಡಿಓ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಮಾತಿನ ಚಕಮಕಿ ತಾರಕಕ್ಕೆ ಹೋಗುವ ಹಂತದಲ್ಲಿದ್ದ ವೇಳೆ ಪಂಚಾಯತ ಸದಸ್ಯರ ಬಂದು ತುರ್ತಾಗಿ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಅವರ ಮುಂದೆ ಇಡಿ ಎಂದಿದಕ್ಕೆ ಪಂಚಾಯತ ಪಿಡಿಓ ಅಧಿಕಾರಿ ಸದಸ್ಯರ ಮಾತಿನಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮಾಹಿತಿ ತಿಳಿಸಲಿದ್ದೇವೆ ಎಂದಿದಕ್ಕೆ ಸಾರ್ವಜನಿಕರ ಒಪ್ಪಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಪುರವರ್ಗ ಶಾಲೆಯ ಶಾಲಾಭಿವ್ರದ್ಧಿ ಸಮಿತಿ ಅಧ್ಯಕ್ಷ ಉದಯ ನಾಯ್ಕ ನಿಮ್ಮ ಮೇಲಾಧಿಕಾರಿಗಳಿಗೆ ಗ್ರಾಮದ ಸಾರ್ವಜನಿಕರಿಗೆ ಘನ ತ್ಯಾಜ್ಯ ಘಟಕ ನಿರ್ಮಾಣ ನಿಗದಿತ ಆ ಸ್ಥಳದಲ್ಲಿ ಮಾಡಲು ತಕರಾರು ಇದೆ ಎಂದು ಗಮನಕ್ಕೆ ತಂದು ಪತ್ರ ಬರೆಯಿರಿ ನೀವು ನಿಮ್ಮ ಅವಧಿ ಮುಗಿಸಿ ಹೋಗುತ್ತೀರಿ ಆದರೆ ಮುಂದೆ ಘಟಕದ ನಿರ್ವಹಣೆ ಮಾಡದೇ ಇದ್ದಲ್ಲಿ ಸಮಸ್ಯೆ ಅನುಭವಿಸುವುದು ಗ್ರಾಮಸ್ಥರು ಹೊರತು ಅಧಿಕಾರಿಗಳಲ್ಲ. ಇಲ್ಲವಾದಲ್ಲಿ ನಿಗದಿತ ಅದೇ ಸ್ಥಳದಲ್ಲಿ ಸರಕಾರದ ಬೇರೆ ಯೋಜನೆಯ ಕಾಮಗಾರಿಯನ್ನು ಮಾಡದಲ್ಲಿ ನಮ್ಮೆಲ್ಲರ ಸಹಕಾರ ಇದೆ. ಇದಕ್ಕೂ ಮೀರಿ ಸಾರ್ವಜನಿಕರ ವಿರೋಧವನ್ನು ಧಿಕ್ಕರಿಸಿ ಕಾಮಗಾರಿ ಮಾಡಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಂಜುನಾಥ ನಾಯ್ಕ, ಸುಬ್ರಾಯ ನಾಯ್ಕ, ಪುರಂದರ ಆಚಾರ್ಯ, ಗಣಪತಿ ನಾಯ್ಕ, ಮಹೇಶ ನಾಯ್ಕ
ಅಣ್ಣಪ್ಪ ನಾಯ್ಕ, ನಾಗೇಶ ನಾಯ್ಕ, ಲಕ್ಷ್ಮಣ ನಾಯ್ಕ ನಾಗೇಂದ್ರ ನಾಯ್ಕ ಮುಂತಾದವರು ಇದ್ದರು.