ಸಿದ್ದಾಪುರ: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಅಗಷ್ಟ 31 ರಂದು ಆಚರಿಸಲು ಪೂರ್ವಭಾವಿ ಸಭೆ

ಸಿದ್ದಾಪುರ: ಭಾರತದ ಸಾಮಾಜಿಕ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಅಗಷ್ಟ 31 ರಂದು ಅರ್ಥಪೂರ್ಣವಾಗಿ ಆಚರಿಸಲು ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಇಲ್ಲಿಯ ತಾಲೂಕಾ ಆಡಳಿತ ಸೌಧದಲ್ಲಿ ತಹಶೀಲ್ದಾರ ಎಂ.ಆರ್.ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಾಮಧಾರಿ ಸಮಾಜದ ಪ್ರಮುಖರು ಪಾಲ್ಗೊಂಡು ಅಗತ್ಯ ಸಲಹೆ-ಸೂಚನೆ ನೀಡಿ ಪಟ್ಟಣದ ಬಾಲಭವನದಲ್ಲಿ ನಾರಾಯಣ ಗುರು ಜಯಂತಿ ಆಚರಿಸಲು ತೀರ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಿನಿ ವಿಧಾನಸೌಧದಿಂದ ವಿವಿಧ ಸ್ತಬ್ಧಚಿತ್ರಗಳನ್ನು ಒಳಗೊಂಡ ಮೆರವಣಿಗೆ ನಡೆಸಿ ನಂತರ ಬಾಲಭವನದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಸರ್ವ ಜನಾಂಗದ ಜನತೆ ಜಯಂತಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು.
ಈ ವೇಳೆ ಬಿ.ಎಸ್.ಎನ್.ಡಿ.ಪಿ ಸಂಘದ ತಾಲೂಕಾ ಅಧ್ಯಕ್ಷ ವಿನಾಯಕ ನಾಯ್ಕ, ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಕೆ.ಜಿ.ನಾಗರಾಜ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾಯ್ಕ,
ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ವಸಂತ ನಾಯ್ಕ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಾವಂಚೂರು, ಪಟ್ಟಣ ಪಂಚಾಯತ ಸದಸ್ಯರಾದ ರವಿಕುಮಾರ ನಾಯ್ಕ, ಸುಧೀರ ನಾಯ್ಕ, ಸಮಾಜದ ಪ್ರಮುಖರಾದ ಕೆ.ಆರ್.ವಿನಾಯಕ, ಸಿ.ಆರ್.ನಾಯ್ಕ, ಪ್ರಶಾಂತ ಅವರಗುಪ್ಪ, ಪಾಂಡುರಂಗ ನಾಯ್ಕ, ದಿನೇಶ ನಾಯ್ಕ, ರವಿಕುಮಾರ ಕೊಠಾರಿ, ಅನಿಲ್ ಕೊಠಾರಿ, ವಾಸು ನಾಯ್ಕ ಮತ್ತಿತರರು ಹಾಜರಿದ್ದು ಸಲಹೆ ನೀಡಿದರು.