ಯುಟಿ ಖಾದರ್ ಜಮೀನಿನಲ್ಲಿ ನಾಗಾರಾಧನೆ! ಹಿಂದೂ ಕುಟುಂಬಕ್ಕೆ ಸ್ಪೀಕರ್​​​ರ ಸಹಾಯ ಎಂತದ್ದೂ ಗೊತ್ತಾ?

ಪುತ್ತೂರು: ವಿಧಾನಸಭೆಯ ಸ್ಪೀಕರ್​ ಯು.ಟಿ ಖಾದರ್​ ಅವರಿಗೆ ಸೇರಿದ್ದ ಪಿತ್ರಾರ್ಜಿತ ಸ್ಥಳದಲ್ಲಿ ಜಮೀನಿನಲ್ಲಿ ಇಂದಿಗೂ ನಾಗರ ಪಂಚಮಿ ಅದ್ದೂರಿಯಾಗಿ ನೆರವೇರುತ್ತಿದೆ. ಅರೆರೇ, ಯುಟಿ ಖಾದರ್ ಅವರಿಗೂ ನಾಗಾರಾಧನೆಗೆ ಎಲ್ಲಿಂದ ಎಲ್ಲಿಗೆ ಸಂಬಂಧ ಅನ್ನೋ ಪ್ರಶ್ನೆಗೆ ನಿಮಗೆ ಮೂಡಿರಬಹುದು. ಈ ಪ್ರಶ್ನೆಗೆ ಉತ್ತರ ನಾವು ಕೊಡ್ತೇವೆ, ಇಂದಿಗೂ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಸಮೀಪದ ಇರುವ ಯುಟಿ ಖಾದರ್​​ ಕುಟುಂಬಕ್ಕೆ ಸೇರಿದ್ದ ಜಮೀನಿನಲ್ಲಿ ನಾಗರ ಪಂಚಮಿ ಅದ್ದೂರಿಯಾಗಿ ನಡೆಯುತ್ತಿದೆ.ನಾಗಾರಾಧನೆಗೆ ಅಂತಲೇ ಸ್ಪೀಕರ್ ಯು.ಟಿ. ಖಾದರ್ ಅವರು ತಮ್ಮ ಜಮೀನು ಬಿಟ್ಟು ಕೊಟ್ಟಿದ್ದಾರೆ. ಈ ಜಾಗ ಯು.ಟಿ.ಖಾದರ್ ತಂದೆಗೆ ಸಂಬಂಧಪಟ್ಟ ಸ್ಥಳವಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಡಿಕ್ಲೇರೇಶನ್ ನಿಯಮದಡಿ ಖಾದರ್ ಕುಟುಂಬಕ್ಕೆ ಈ ಸ್ಥಳ ದೊರೆತಿತ್ತಂತೆ. ನಾಗಾರಾಧನೆ ನಡೆಯುತ್ತಿರುವ ಸ್ಥಳ ಮೂಲವಾಗಿ ದಳವಾಯಿ ಕುಟುಂಬಕ್ಕೆ ಸೇರಿದ್ದ ಜಾಗ ಆಗಿತ್ತಂತೆ. ಅಂದು ದಳವಾಯಿ ಕುಟುಂಬಕ್ಕೆ ಸಾವಿರಾರು ಎಕರೆ ಜಾಗವಿತ್ತು. ಆದರೆ ಡಿಕ್ಲರೇಶನ್ ನಿಂದ ಯುಟಿ ಖಾದರ್ ಅವರ ತಂದೆಗೆ 13 ಎಕರೆ ಭೂಮಿ ದೊರೆತಿತ್ತು. ಅನಾದಿ ಕಾಲದಿಂದಲೂ ದಳವಾಯಿ ಕುಟುಂಬಸ್ಥರು ಅದೇ ಜಾಗದಲ್ಲಿ ನಾಗಾರಾಧನೆ ನಡೆಸಿಕೊಂಡು ಬಂದಿದ್ದರಂತೆ. ಡಿಕ್ಲರೇಶನ್ ಕಾನೂನು ಬಳಿಕ ದಳವಾಯಿ ಕುಟುಂಬ ಹಂಚಿ ಹೋಗಿತ್ತು. ಈ ನಡುವೆ ದಳವಾಯಿ ಕುಟುಂಬಸ್ಥರು ನಾಗದೋಷ ಪರಿಹಾರವಾಗಿ ಅಷ್ಟಮಂಗಲ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ ನಾಗ ಹಸಿವಿನಿಂದ ಇರುವುದಾಗಿ ಪ್ರಶ್ನೆಯಲ್ಲಿ ತಿಳಿದು ಬಂದಿತ್ತಂತೆ.ಪರಿಹಾರಕ್ಕೆ ಮುಂದಾದ ವೇಳೆ ಮೂಲ ನಾಗ ಇರುವ ಜಾಗ ಮುಸ್ಲಿಂ ವ್ಯಕ್ತಿಗಳ ಕೈಯಲ್ಲಿ ಇರುವುದು ಬೆಳಕಿಗೆ ಬಂದಿತ್ತು. ಜಾಗದ ಮಾಲಕ ಯು.ಟಿ.ಖಾದರ್ ಕುಟುಂಬಸ್ಥರು ಎಂದು ತಿಳಿದು 2011ರಲ್ಲೇ ಅವರನ್ನು ದಳವಾಯಿ ಕುಟುಂಬ ಸಂಪರ್ಕಿಸಿ, ನಾಗರಾಧನೆಗೆ 10 ಸೆಂಟ್ಸ್ ಜಾಗ ನೀಡುವಂತೆ ಮನವಿ ಮಾಡಿದ್ದರಂತೆ.ದಳವಾಯಿ ಕುಟುಂಬಸ್ಥರ ಮನವಿ ವಿಷಯ ತಿಳಿದ ಯು.ಟಿ ಖಾದರ್ ಅವರು ದಳವಾಯಿ ಕುಟುಂಬಕ್ಕೆ ನಾಗಾರಾಧನೆಗೆ ಬೇಕಾದ 20 ಸೆಂಟ್ಸ್ ಜಾಗವನ್ನು ಹಿಂದೂ ಕುಟುಂಬಕ್ಕೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಜಾಗಕ್ಕೆ ಯಾವುದೇ ಹಣವನ್ನೂ ಪಡೆದುಕೊಂಡಿರಲಿಲ್ಲವಂತೆ.ಆ ಬಳಿಕ ದಳವಾಯಿ ಕುಟುಂಬ ಅದೇ ಜಾಗದಲ್ಲಿ ನಾಗನ ಆರಾಧನೆ ಪ್ರಾರಂಭಿಸಿದೆ. ಸ್ಥಳದಲ್ಲಿ ನಾಗನ ಕಟ್ಟೆಯನ್ನು ಜೀರ್ಣೋದ್ಧಾರವೂ ಮಾಡಲಾಗಿದೆ. ಅಲ್ಲಿಂದ ಇಂದಿಗೂ ಸ್ಥಳಲ್ಲಿ ಪ್ರತೀ ವರ್ಷ ನಾಗಾರಾಧನೆ ನೆರವೇರುತ್ತಿದೆ.