ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ಏಕಾಏಕಿ ಬೆಂಕಿ, ನಡುರಾತ್ರಿ ಹೊತ್ತಿ ಉರಿದ ಕಾರು!

ಬೆಂಗಳೂರು : ವೈಯಾಲಿಕಾವಲ್‌ನ ವಿನಾಯಕ ಸರ್ಕಲ್ ಬಳಿ ನಡುರಾತ್ರಿ ಕಾರೊಂದು ಹೊತ್ತಿ ಉರಿದಿದೆ. ಸಿಎನ್‌ಜಿ ವಾಹನಕ್ಕೆ ಬೆಂಕಿ ತಗುಲಿದೆ. ಕಾರು ಚಾಲಕ ಗಾಡಿಯಲ್ಲಿಯೇ ಮಲಗಿದ್ದಾಗಲೇ, ಏಕಾಏಕಿ ಬೆಂಕಿ ಹತ್ತಿದೆ. ಕೂಡಲೇ ಕಾರಿನಿಂದ ಹೊರಬಂದಿದ್ದ. ಕಾರಿನ ಕೆಳಗೆ ಪೆಟ್ರೋಲ್ ಕ್ಯಾನ್ ಇತ್ತು ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.