ಆಯತಪ್ಪಿ ರೈಲಿನಡಿ ಬೀಳುತ್ತಲಿದ್ದ ಮಹಿಳೆಯನ್ನು ರಕ್ಷಿಸಿದ ಮಹಿಳಾ ಸಿಬ್ಬಂದಿ

ಉಡುಪಿ, ಸೆಪ್ಟೆಂಬರ್ 20: ಆಯತಪ್ಪಿ ರೈಲಿನಡಿ ಬೀಳುತ್ತಲಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಮಹಿಳಾ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಉಡುಪಿ ರೈಲು ನಿಲ್ದಾಣದಲ್ಲಿ ನಡೆದಿದೆ. ಉಡುಪಿ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಗಳೂರು ಮಾಡ್ಗಾಂವ್ ಪ್ಯಾಸೆಂಜರ್ ರೈಲು ನಿಲ್ದಾಣಕ್ಕೆ ಬಂದು ನಿಲ್ಲುವ ಮೊದಲೇ, ವೇಗವಾಗಿ ಸಂಚರಿಸುತ್ತಿದ್ದಾಗಲೇ ಮಹಿಳೆ ಓಡಿಹೊಗಿ ರೈಲನ್ನೇರಲು ಪ್ರಯತ್ನಿಸಿದ್ದಾರೆ. ಈ ವೇಳೆ, ಮಹಿಳೆ ಆಯತಪ್ಪಿ ಬಿದ್ದಿದ್ದಾರೆ. ಆಕೆ ಬೀಳುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಆರ್​ಪಿಎಫ್​​​ ಸಿಬ್ಬಂದಿ ಅರ್ಪಣಾ ಜೀವದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಆರ್​ಪಿಎಫ್​​​ ಸಿಬ್ಬಂದಿ ಅರ್ಪಣಾ ಸಾಹಸಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿಯಿಂದ ಹಾಗೂ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.