ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆ..! ವಾಹನ ಸವಾರರ ಪರದಾಟ

ಬೆಂಗಳೂರು, ಆಗಸ್ಟ್. 12: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗಿನ ಜಾವ ಅಬ್ಬರಿಸಿದ ವರುಣನ ಆರ್ಭಟಕ್ಕೆ ಹಲವು ಅವಾಂತರ ಸೃಷ್ಟಿಯಾಗಿದೆ.

ರಾತ್ರಿ 2.30 ಸುಮಾರಿಗೆ ಶುರುವಾದ ಮಳೆ, 6:30ವರೆಗೆ ಸಾಧಾರಣವಾಗಿ ಸುರಿದಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ರಸ್ತೆಗಳು ಜಲಾವೃತವಾಗಿದೆ.

ಇನ್ನು ಮಧ್ಯಾಹ್ನ 2 ಗಂಟೆಯ ನಂತರ ಬೆಂಗಳೂರಿನ ನಾನಾ ಪ್ರಾಂತ್ಯಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಹೆಬ್ಬಾಳ, ರಾಜರಾಜೇಶ್ವರಿ ನಗರ, ಎಚ್‌ ಎಸ್‌ ಆ‌ರ್ ಲೇಔಟ್, ಚಾಮರಾಜಪೇಟೆ, ಎಚ್ ಎಎಲ್‌, ಮೆಜಿಸ್ಟಿಕ್ ಮುಂತಾದ ಕಡೆಗಳಲ್ಲಿ ಮಳೆ ಆಗಿದೆ.

ವರುಣನ ಆರ್ಭಟಕ್ಕೆ ಹೆಬ್ಬಾಳ ಪ್ರೈಓವರ್ ಮೇಲೆ ನೀರು ನಿಂತಿದ್ದು ವಾಹನ ಸವಾರರು ನಿಧಾನವಾಗಿ ಸಾಗಬೇಕೆಂದು ಬೆಂಗಳೂರು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ

ಮುಂದಿನ ಒಂದು ವಾರ ಉತ್ತರ ಒಳನಾಡಿನ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಆ.12 ಮತ್ತು 16ರ ತನಕ ಮಳೆ ಆಗಲಿದೆ ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಂದು ವಾರ ಸಾಧಾರಣ ಮಳೆಯಾಗಲಿದೆ.

ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.