ಸಿದ್ದಾಪುರ : ಸಣ್ಣಪುಟ್ಟ ಕೆಲಸಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾಡುವುದಾದರೆ ಇಲ್ಲಿಯ ಶಾಸಕರ ಜವಾಬ್ದಾರಿ ಏನು-ಮಾರುತಿ ನಾಯ್ಕ.

ಸಿದ್ದಾಪುರ : ಸಾರ್ವಜನಿಕರು ಶಾಸಕರಲ್ಲಿ ಯಾವುದೇ ಮನವಿ ನೀಡಿದರು ಅದನ್ನು ಮುಖ್ಯಮಂತ್ರಿಗಳ ಬಳಿ ಕಳಿಸಲಾಗಿದೆ ಎಂಬ ಹಾರಿಕೆಯ ಉತ್ತರವನ್ನು ಎಲ್ಲರಿಗೂ ನೀಡುತ್ತಿದ್ದಾರೆ
, ಸಣ್ಣಪುಟ್ಟ ಕೆಲಸಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾಡುವುದಾದರೆ ಇಲ್ಲಿಯ ಶಾಸಕರ ಜವಾಬ್ದಾರಿ ಏನು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಪ್ರಶ್ನಿಸಿದ್ದಾರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ
ಮಾತನಾಡಿದ ಅವರು ಸಾರ್ವಜನಿಕರಿಗೆ ಆಗುತ್ತಿರುವ ಹಲವಾರು ತೊಂದರೆಗಳು ಕುರಿತು ಆರೋಪ ಮಾಡಿದರು.
ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದರು ಸಾರ್ವಜನಿಕರಿಗೆ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೊಡ್ಡ ಪ್ರಮಾಣದ ಕೂಗು ಕೇಳಿ ಬರುತ್ತಿದೆ . ಈ ಕುರಿತು ಹಲವಾರು ಜನ ನಮ್ಮಲ್ಲಿ ಅಳಲು ತೋಡಿಕೊಂಡಿದ್ದಾರೆ. ಚುನಾವಣೆ ಪೂರ್ವದಲ್ಲಿ ನಮ್ಮ ಶಿರ್ಸಿ ಸಿದ್ದಾಪುರ ಕ್ಷೇತ್ರದ ಈಗಿನ ಶಾಸಕರಾದ ಭೀಮಣ್ಣ ನಾಯ್ಕ ರವರು. ತಾಲೂಕಿನಲ್ಲಿ ಅಕ್ರಮ ಸರಾಯಿ ಬಂದ್ ಮಾಡುವುದಾಗಿ ಹಾಗೂ ಅತಿಕ್ರಮಣ ದಾರರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಆದರೆ ಈಗ ಅತಿಕ್ರಮಣ ಮಾಡಿದ ಬಹಳಷ್ಟು ಜನರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಅಕ್ರಮ ಸರಾಯಿ ಬಂದ್ ಮಾಡುವ ಬಗ್ಗೆ ಮನವಿ ನೀಡಿದಾಗ ಶಾಸಕರು ಹೇಳುತ್ತಾರೆ ಜನಸಾಮಾನ್ಯರು ಸಾರಾಯಿ ಕುಡಿಯುವುದು ಕಡಿಮೆ ಮಾಡಿದರೆ ಸರಾಯಿ ಮಾರಾಟ ಕಡಿಮೆಯಾಗುತ್ತದೆ ಎಂದು ಇನ್ನುತ್ತಾರೆ. ಹಳ್ಳಿಗಳಲ್ಲಿ ಅಕ್ರಮ ಸರಾಯ ಮಾರಾಟ ಬಂದ್ ಮಾಡುವುದು ಬಿಟ್ಟು ಜನ ಕುಡಿಯುವುದು ಬಿಟ್ಟರೆ ಬಂದಾಗುತ್ತದೆ ಎಂದು ಯಾವ ಅರ್ಥದಲ್ಲಿ ಹೇಳಿದರು ಅರ್ಥವಾಗುತ್ತಿಲ್ಲ ಎಂದ ಅವರು ತಾಲೂಕಿನಲ್ಲಿ ಜನತೆ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆ ತಿಳಿಸಿ ಶಾಸಕರ ನಿರ್ಲಕ್ಷ ಬಗ್ಗೆ ಆರೋಪಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಕೆ ತಿಮ್ಮಪ್ಪ, ತೋಟಪ್ಪ ನಾಯ್ಕ್ ಸುರೇಶ್ ನಾಯ್ಕ್ ವಿಜೇತ್ ಗೌಡರ್, ನಂದನ್ ಬೋರಕರ, ರಾಘವೇಂದ್ರ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.