ಸಿದ್ಧಾಪುರ: ಜಾನಪದ ಡೊಳ್ಳಿನೊಂದಿಗೆ ಪರಿಸರ ಜಾಗೃತಿ ರ‍್ಯಾಲಿ, ಮಕ್ಕಳಿಗೆ ಗಿಡ ವಿತರಣೆ, ಗಿಡ ನೆಡುವಿಕೆ, ಪರಿಸರ ಜಾಗೃತೆ ಸಭೆ ಮುಂತಾದ ವೈವಿಧ್ಯಮಯವಾಗಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ ಇಂದು ಸಿದ್ಧಾಪುರದಲ್ಲಿ ಯಶಸ್ವಿಯಾಗಿ ಚಾಲನೆಗೊಂಡಿತು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಜಿಲ್ಲಾದ್ಯಂತ ಏಕಕಾಲದಲ್ಲಿ ಚಾಲನೆಗೊಂಡ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮವನ್ನ ಸಿದ್ಧಾಪುರ ತಾಲೂಕಿನ, ಶಿರಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಗಿಡ ನೆಟ್ಟು, ವಿದ್ಯಾರ್ಥೀಗಳಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿರುವುದು ವಿಶೇಷವಾಗಿತ್ತು.
ಶಿರಳಗಿ ಪ್ರಾರ್ಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಟ್ಟ ನಂತರ, ಶಿರಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪರಿಸರ ಜಾಗೃತೆ ಫಲಕದೊಂದಿಗೆ ರ‍್ಯಾಲಿ ಜರುಗಿದ್ದು, ಹೊಳೆಆಚಿನ ಕೇರೆಯಲ್ಲಿ ಪರಿಸರ ಜಾಗೃತೆ ಹಮ್ಮಿಕೊಳ್ಳಲಾಯಿತು.
ಇಂದಿನ ಸಮಾಜಕ್ಕೆ ಉತ್ತಮ ಸಂದೇಶವನ್ನ ಸಾರಿದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ ಪ್ರಶಂಸೆಗೆ ಅರ್ಹ. ಇಂತಹ ಕಾರ್ಯವು ರಾಜ್ಯಾದ್ಯಂತ ಪಸರಿಸಲಿ ಎಂದು ಕಾಗೋಡ ತಿಮ್ಮಪ್ಪ ಅವರು ಹೇಳಿದರು.