ಹಳಿಯಾಳ ಪಟ್ಟಣದ ಕರ್ನಾಟಕ ಒನ್ ಕೇಂದ್ರಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಭೇಟಿ

ಹಳಿಯಾಳ‌ : ಪಟ್ಟಣದ ಕರ್ನಾಟಕ ಒನ್ ಕೇಂದ್ರಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಇಂದು ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಯೋಜನೆಗಳ ಪ್ರಕ್ರಿಯೆಯನ್ನು ವೀಕ್ಷಿಸಿ ಸಿಬ್ಬಂದಿಗಳಿಂದ ನೋಂದಣಿಯ ಮಾಹಿತಿಯನ್ನು ಪಡೆದುಕೊಂಡರು.

ನೋಂದಣಿ ಪ್ರಕ್ರಿಯೆ ಸಮಯದಲ್ಲಿ ಯಾವುದೇ ತಾಂತ್ರಿಕ ಅಡೆತಡೆ ಉಂಟಾಗದಂತೆ ನಿಗಾವಹಿಸುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರದ ಬಳಿ ಸರದಿಯಲ್ಲಿ ನಿಂತ ಸಾರ್ವಜನಿಕರನ್ನೂ ಮಾತನಾಡಿಸಿ,ನೋಂದಣಿ ಸಮಯದಲ್ಲಿ ಸಮಸ್ಯೆಗಳಿದ್ದರೆ ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ತಿಳಿಸಿದರು. ಶಾಸಕರ ಜೊತೆ ಅಧಿಕಾರಿಗಳು, ಪುರಸಭೆಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.