ಬಿ.ಕೆ. ಹರಿಪ್ರಸಾದ್ ಅವರನ್ನು ಪಕ್ಷ ನಿರ್ಲಕ್ಷ ಮಾಡಿಲ್ಲ ಅವರನ್ನ ಪಕ್ಷ ಎಂ. ಎಲ್. ಸಿ ಮಾಡಿದೆ-ಕಾಗೋಡು ತಿಮ್ಮಪ್ಪ

ಸಿದ್ದಾಪುರ : ಬಿ.ಕೆ. ಹರಿಪ್ರಸಾದ್ ಅವರನ್ನು ಪಕ್ಷ ನಿರ್ಲಕ್ಷ ಮಾಡಿಲ್ಲ ಅವರನ್ನ ಪಕ್ಷ ಎಂ. ಎಲ್. ಸಿ ಮಾಡಿದೆ ಅವರಿಗೆ ನೇರವಾಗಿ ಚುನಾವಣೆ ನಿಲ್ಲುವುದು ಸ್ವಲ್ಪ ಕಷ್ಟ ಅವರು ಬಂದಿರುವಂತಹ ಕ್ಷೇತ್ರದಲ್ಲಿ ಸಂಘಟನೆ ಮಾಡಿಕೊಂಡು ಬೆಳೆದು ಬಂದಿದ್ದರೆ ಅವರಿಗೆ ಮಂತ್ರಿ ಮಾಡುವುದರಲ್ಲಿ ಭಿನ್ನಾಭಿಪ್ರಾಯ ಇರಲಿಲ್ಲ ಈಗಲೂ ಮಾಡಬಹುದಿತ್ತು ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಹೇಳಿದರು.
ಅವರು ಇಂದು ಸಿದ್ದಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಹೇಳಿಕೆ ನೀಡಿದರು.
ಅವರು ರಾಜಕೀಯವಾಗಿ ಹಿಂದುಳಿದಿರುವಂತಹ ಕ್ಷೇತ್ರದಿಂದ ಬಂದರು ಅದು ಸಾಧ್ಯವಾಗಲಿಲ್ಲ ಆದಾಗಿಯೂ ಕೂಡ ಪಕ್ಷ ಅವರನ್ನ ಎಂ.ಎಲ್. ಸಿ ಮಾಡಲಾಗಿದೆ ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯವರು ರಾಜ್ಯಾಧ್ಯoತ ಸುದ್ದಿಗೋಷ್ಠಿ ನಡೆಸಿ ಹರಿ ಪ್ರಸಾದ್ ಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು ಸಮಾಜದಲ್ಲಿ ಈ ವಿಷಯ ಚರ್ಚೆಯಲ್ಲಿತ್ತು ಈ ಬೆನ್ನೆಲ್ಲೆ ಕಾಗೋಡು ತಿಮ್ಮಪ್ಪ ಈ ರೀತಿ ಹೇಳಿಕೆ ನೀಡಿದ್ದಾರೆ.