ಸಿದ್ದಾಪುರ : ಒಬ್ಬ ಶಿಕ್ಷಕಿಯ ವಯೋ ನಿವೃತ್ತಿ ಯ ಬೀಳ್ಕೊಡುಗೆ ಕಾರ್ಯಕ್ರಮವನ್ನು ಇಡೀ ಊರು ಒಟ್ಟಾಗಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುವುದು ಎಂದರೆ ಅಚ್ಚರಿ ಆಗಬಹುದು ಅಲ್ಲದೆ ವಿದ್ಯಾರ್ಥಿ ಗಳು ಪಾಲಕರು ಹಾಗೂ ನಿವೃತ್ತಿ ಹೊಂದಿದ ಶಿಕ್ಷಕಿ ಹೀಗೆ ಎಲ್ಲರೂ ಕಣ್ಣೀರಿಡುತ್ತಲೆ ಆ ಕಾರ್ಯಕ್ರಮ ನಡೆಯಿತು ಎಂದರೆ ಬಹುಶಃ ಆ ಬಾಂಧವ್ಯ ಯಾವ ರೀತಿ ಎಂದು ಯೋಚಿಸಬೇಕಾಗುತ್ತದೆ ಹೌದು ಈ ರೀತಿಯ ಮನ ಮುಟ್ಟುವ ಕಾರ್ಯಕ್ರಮದ ಸನ್ನಿವೇಶ ನಡೆದದ್ದು ಸಿದ್ದಾಪುರ ತಾಲೂಕಿನ
ಕೋಲ್ ಸಿರ್ಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲಗಡಿಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಿಕ್ಷಕಿಯ ಬೀಳ್ಕೊಡುಗೆ ಕಾರ್ಯಕ್ರಮ
ಅದೇ ಶಾಲೆಯಲ್ಲಿ ಸೇವೆ ಆರಂಭಿಸಿ ಸುಮಾರು 30 ವರ್ಷಗಳ ಕಾಲ ಅಲ್ಲೇ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ರಾಜಮ್ಮ ಎಚ್ ನಾಯಕ ರವರ ಬೀಳ್ಕೊಡುಗೆ ಕಾರ್ಯಕ್ರಮವದು
ಈ ಹಿಂದೆ ಆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಶಿಕ್ಷಕಿಯ ನಿವೃತ್ತಿ ವಿಷಯ ತಿಳಿದು ಅವರಿಗೆ ನಮ್ಮ ಊರಿನ ವಿದ್ಯಾರ್ಥಿಗಳ ನೆನಪು ಸದಾ ಇರಬೇಕು ಆ ರೀತಿಯಲ್ಲಿ ಕಾರ್ಯಕ್ರಮ ಮಾಡಿ ಅವರಿಗೆ ಬೀಳ್ಕೊಡುಗೆ ಮಾಡಬೇಕು ಎಂದು ತೀರ್ಮಾನಿಸಿ ಸಮಾನ ಮನಸ್ಕರು ಸೇರಿ ಕಳೆದ ಆರು ತಿಂಗಳಿನಿಂದ ಪ್ರತಿ ನಿತ್ಯ ಯೋಚಿಸುತ್ತ ಹಿರಿ ಕಿರಿಯರ ಸಲಹೆ ಪಡೆದು ಒಳ್ಳೆ ಮಾದರಿ ಕಾರ್ಯಕ್ರಮ ಮಾಡೋಣ ಎಂದು ಶಾಲಾ ವ್ಯಾಪ್ತಿಯ ಎಲ್ಲ ಮನೆಗಳಿಗೂ ತೆರಳಿ ಸಲಹೆ ಸಹಕಾರ ಪಡೆದು ಹಳೆ ವಿದ್ಯಾರ್ಥಿ ಸಂಘ ರಚಿಸಿ ಕಾರ್ಯಕ್ರಮ ಆಯೋಜನೆ ಮಾಡಿದರು
ನಿವೃತ್ತಿ ಹೊಂದುವ ಶಿಕ್ಷಕಿಯನ್ನು ಶಾಲಾ ಆವರಣದಿಂದ ಶಾಲೆಗೆ ಗ್ರಾಮೀಣ ಕಲೆಯಾದ ಡೊಳ್ಳಿನ ಕುಣಿತದ ಮೂಲಕ ಶಾಲೆಗೆ ಸ್ವಾಗತಿಸಿದರು
ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಹ ನಡೆಯಿತು
ವಿದ್ಯಾರ್ಥಿಗಳೆಲ್ಲರೂ ನಿವೃತ್ತಿ ಹೊಂದುವ ಶಿಕ್ಷಕಿಗೆ ತಮ್ಮ ಸ್ಮರಣಿಕೆ ನೀಡಿ ಆಶೀರ್ವಾದ ಪಡೆದರು
ಎಲ್ಲೋ ಯಾವುದೊ ಪ್ರೀತಿ, ಸ್ನೇಹ, ಬಾಂಧವ್ಯ, ಒಡನಾಟ ಕಳೆದುಕೊಳ್ಳುತ್ತಿದ್ದೇನೆ ಎನ್ನುವಂತಹ ಭಾವ ಶಿಕ್ಷಕಿಯ ಮುಖದಲ್ಲಿ ಕಾಣುತ್ತಿತ್ತು ಅವರ ಕಣ್ಣoಚಿನಿಂದ ಇಳಿದು ಬರುತ್ತಿದ್ದ ಕಣ್ಣೀರು ಅದಕ್ಕೆ ಸಾಕ್ಷಿಯಾಗಿತ್ತು ವಿದ್ಯಾರ್ಥಿಗಳು ಸಹ ಪ್ರೀತಿಯ ಶಿಕ್ಷಕರು ನಾಳೆಯಿಂದ ಪಾಠವನ್ನು ಹೇಳಲು ಬರುವುದಿಲ್ಲ ಎನ್ನುವ ನೋವು ತುಂಬಿದ ಮನದಲ್ಲಿ ಗುರುವನ್ನು ತಬ್ಬಿಕೊಂಡು ಕಣ್ಣೀರಿಟ್ಟರು ಇಂಥ ಒಂದು ಅದ್ಭುತ ಸನ್ನಿವೇಶ ನಡೆಯಬೇಕು ಎಂದರೆ ಅವರೊಳಗಿನ ಒಡನಾಟ ಹೇಗಿರಬಹುದು ಎಂದು ಹೇಳಲು ಮಾತುಗಳೇ ಇರಲಿಲ್ಲ ಹಳೆ ವಿದ್ಯಾರ್ಥಿಗಳ ಸಂಘದವರು ಆಯೋಜಿಸಿದ ಈ ಕಾರ್ಯಕ್ರಮ ನಿಜಕ್ಕೂ ಅದ್ಭುತ ಹಾಗೂ ಮಾದರಿ ಎನ್ನುವ ಮಾತುಗಳು ಹಿರಿಯರಿಂದ ಕೇಳಿ ಬಂತು.