ಸಿದ್ದಾಪುರ : ಪ್ರಕೃತಿ ಸೌಂದರ್ಯದ ನಡುವೆ ಕಲ್ಲಿನ ಹಾಸಿಗೆ ಮೇಲೆ ಶರವೇಗದಲ್ಲಿ ಬಂದು ಧುಮುಕುವ ಜಲಪಾತವನ್ನು ನೋಡುವುದು ಎಂದರೆ ಕಣ್ಣಿಗೆ ಇಂಪಾಗುವುದರ ಜೊತೆಗೆ ಮನಸ್ಸಿಗೆ ಆನಂದ ಉಂಟುಮಾಡುತ್ತದೆ
ಪ್ರವಾಸ ಕ್ಕೆ ಬಂದವರಿಗೆ ಜಲಪಾತದಲ್ಲಿ ಧುಮುಕುವ ಹಾಲ್ನೊರೆಯ ನೀರು ನೋಡಲು ಕಾಣಸಿಕ್ಕರೆ ನಿಜಕ್ಕೂ ಕೂಡ ಆ ಕ್ಷಣವು ಅದ್ಭುತವಾಗಿರುತ್ತದೆ
ಇನ್ನು ಜಲಪಾತದ ನೀರಿನಲ್ಲಿ ಆಟವಾಡಲು ಸಿಕ್ಕರೆಂತು ಮನಕ್ಕೆ ಹಬ್ಬವೊ ಹಬ್ಬ ಹೌದು ಇಂತಹ ಸನ್ನಿವೇಶ ಕಂಡು ಬಂದಿರುವುದು ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಸುರು ( ನಿಪ್ಲಿ ) ಜಲಪಾತದಲ್ಲಿ
ರೈತರ ಕೃಷಿ ಬಳಕೆಗಾಗಿ ಹಿನ್ನಿರಿಗೆ ಡ್ಯಾಮ್ ಕಟ್ಟಿ ಡ್ಯಾಮ್ ಇಂದ ಹೆಚ್ಚಾದ ನೀರನ್ನು ಒಂದು ಭಾಗದಲ್ಲಿ ಹರಿಯಲು ಬಿಡಲಾಗಿದೆ ಸುಮಾರು 150 ರಿಂದ 200 ಮೀಟರ್ ದೂರದಿಂದ ಕಲ್ಲಿನ ಹಾಸಿನ ಮೇಲೆ ಬಳ್ಳಿಯಂತೆ ಬಳುಕುತ್ತಾ ಜುಳು ಜುಳು ಸದ್ದು ಮಾಡುತ್ತಾ ಬಂದು ಬೋರ್ಗರೆಯುತ್ತ ಧುಮುಕುವುದು ಈ ಜಲಪಾತದ ವಿಶೇಷವಾಗಿದೆ ಹರಿಯುವ ನೀರಿನಲ್ಲಿ ಪ್ರವಾಸಿಗರು ಮೈ ಮರೆತು ಪರಸ್ಪರ ನೀರನ್ನು ಎರೆಚುತ್ತ ಸ್ನಾನ ಮಾಡುತ್ತ ಜೊತೆಯಲ್ಲಿ ಮಕ್ಕಳನ್ನು ನೀರಿನಲ್ಲಿ ಆಟವಾಡಿಸಿ ಕುಟುಂಬಸ್ಥರು ಎಲ್ಲರು ಸೇರಿ ಬಿಡುವಿನ ಸಮಯವನ್ನು ಉಲ್ಲಾಸದಿಂದ ಕಳೆಯುವ ಕ್ಷಣವನ್ನು ನಾವು ಕಾಣಬಹುದಾಗಿದೆ ತಾಲೂಕಿನಲ್ಲಿ ನಾಲ್ಕಾರು ಜಲಪಾತಗಳಿದ್ದರೂ ನೀರಿನಲ್ಲಿ ಇಳಿದು ಆಟವಾಡಲು ಅನುಕೂಲ ಇರುವುದು ಇದೊಂದೇ ಜಲಪಾತ ಹಾಗಾಗಿ ಸಹಜವಾಗಿ ಈ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ನೀರಿನಲ್ಲಿ ಬಂದು ಆಟವಾಡುತ್ತ ಕುಳಿತರೆ ಸಮಯ ಕಳೆದದೆ ಗೊತ್ತಾಗಲಾರದಷ್ಟು ಮೈ ಮರೆಸುತ್ತದೆ
ವಾರದ ಅಂತ್ಯ,ರಜೆ ದಿನಗಳಂತೂ ಇಲ್ಲಿ ಜನ ಜಂಗೂಳಿ ಇಂದ ಕೂಡಿರುತ್ತದೆ ಇಲ್ಲಿಗೆ ಬಂದ ಪ್ರತಿಯೊಬ್ಬರು ಜಲಪಾತದ ಸೌಂದರ್ಯ ನೋಡುವುದರ ಜೊತೆಗೆ ನೀರಿನಲ್ಲಿ ಆಟವಾಡಿ ಸಂಭ್ರಮಿಸುವುದನ್ನು ಇಲ್ಲಿ ಕಾಣಬಹುದಾಗಿದೆ