ಜೋಯಿಡಾ : ತಾಲ್ಲೂಕಿನಲ್ಲಿ ಸುರಿದ ಭೀಕರ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದ್ದರೇ, ಇನ್ನೂ ಹಲವು ಕಡೆಗಳಲ್ಲಿ ಸಂಚಾರ ಸಂಪರ್ಕವೆ ಕಡಿತಗೊಂಡಿದೆ. ತಾಲ್ಲೂಕಿನ ಕಾತೇಲಿ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಕಾನೇರಿ ಡ್ಯಾಂನಲ್ಲಿ ಮಳೆಯ ನೀರು ಸೇರಿದಂತೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಝಲಾವಳಿ ಗ್ರಾಮದ ಕೇಲೋಲಿ ಮಜರೆಯ ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮಸ್ಥರ ಮನವಿಯ ಮೇರೆಗೆ ತಾಲ್ಲೂಕಾಡಳಿತ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ತಹಶೀಲ್ದಾರ್ ಬಸವರಾಜ್ ತೆನ್ನಳಿಯವರ ಮಾರ್ಗದರ್ಶನದಡಿ ಕಂದಾಯ ನಿರೀಕ್ಷಕರಾದ ಗಣಪತಿ ಮೇತ್ರಿಯವರ ನೇತೃತ್ವದಲ್ಲಿ ಬೋಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸೂಪಾ ತಾಲ್ಲೂಕು ವಾಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ಅವರು ಸಿಬ್ಬಂದಿ ಸಹಿತ ಬೋಟನ್ನು ಒದಗಿಸಿ ತಾಲ್ಲೂಕಾಡಳಿತ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.