ಸಿದ್ದಾಪುರ : ತಾಲೂಕಿನಲ್ಲಿ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದು ಮಳೆಯಿಂದ ನಿಂತ ಕೃಷಿ ಚಟುವಟಿಕೆಗಳು ಮತ್ತೆ ಆರಂಭಗೊಂಡಿರುವ ದೃಶ್ಯಗಳು ಕಂಡುಬಂದಿವೆ
ಜುಲೈ ತಿಂಗಳಿನಲ್ಲಿ ಕೃಷಿ ಚಟುವಟಿಕೆ ಅಡಿಕೆಗೆ ಮದ್ದು ಸಿಂಪಡಣೆ, ಗದ್ದೆ ನಾಟಿ, ಗದ್ದೆ ಉಳುಮೆ ಮುಂತಾದ ಕಾರ್ಯಗಳು ನಡೆಯುತ್ತಿದ್ದವು ಆ ಮಧ್ಯದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಗದ್ದೆಗಳು ಜಲಾವೃತ ಗೊಂಡಿದ್ದವು . ಹಾಗಾಗಿ ಕೃಷಿ ಚಟುವಟಿಕೆ ಕಾರ್ಯವು ಸುಮಾರು ಒಂದು ವಾರಗಳ ಕಾಲ ಸ್ಥಗಿತಗೊಂಡಿತ್ತು
ಗುರುವಾರದಿಂದ ರೈತರು ಮತ್ತೆ ಗದ್ದೆಗೆ ಇಳಿದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ದೃಶ್ಯ ಕಂಡುಬಂದಿತು