ದಾಂಡೇಲಿ : ಕಂದಾಯ ಇಲಾಖೆಯ 53 ಸೇವೆಗಳನ್ನೊಳಗೊಂಡ ಅಟಲ್ ಜೀ ಸೇವಾ ಕೇಂದ್ರಗಳ ಪೈಕಿ ರಾಜ್ಯದಲ್ಲಿ ದಾಂಡೇಲಿ ತಾಲ್ಲೂಕು ಜುಲೈ ತಿಂಗಳ ಕಾರ್ಯಸಾಧನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಅದೇ ರೀತಿ ಭೂಮಿ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಸ್ಥಾನದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಈ ಬಗ್ಗೆ ಇಂದು ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್ ಮತ್ತು ಅಟಲ್ ಜೀ ಜನ್ಮಸ್ನೇಹಿ ವಿಭಾಗದ ವಿಷಯ ನಿರ್ವಾಹಕರಾದ ಗೌಡಪ್ಪ ಬನಾಕದಿನ್ನಿಯವರು ಉಪಸ್ಥಿತರಿದ್ದರು.