ಅಂಕೋಲಾ : ಪರಿಸರದ ಜೊತೆಗ ಅನುಸಂಧಾನದಿಂದ ಮಾತ್ರ ಅರಣ್ಯ ರಕ್ಷಣೆ


ಅಂಕೋಲಾ: ಗ್ರಂಥಗಳನ್ನು ಓದುವುದರಿಂದ, ಭಾಷಣಗಳನ್ನು ಕೇಳುವುದರಿಂದ ಪರಿಸರ ಜಾಗೃತಿ ಉಂಟಾಗುವುದಿಲ್ಲ. ಕಡಲ ಕಿನಾರೆ, ನದಿ ತೀರಗಳು, ದಟ್ಟ ಅರಣ್ಯ ಮತ್ತು ಪರ್ವತ ಶ್ರೇಣಿಗಳಲ್ಲಿ ಖುದ್ದಾಗಿ ತಿರುಗಾಡಿ ಅನುಸಂದಾನ ನಡೆಸಿದಾಗ ಮಾತ್ರ ಪರಿಸರ ಪ್ರೀತಿ ಅರಣ್ಯ ರಕ್ಷಣೆಯ ಒಲವು ಮನುಷ್ಯರಲ್ಲಿ ಜಾಗೃತಿಗೊಳ್ಳುತ್ತದೆ ಎಂದು ಕೆನರಾ ವೆಲ್‌ಫೇರ್ ಟ್ರಸ್ಟಿನ ಅಧ್ಯಕ್ಷರಾದ ಎಸ್. ಪಿ. ಕಾಮತ ಹೇಳಿದರು.
ಗುರುವಾರ ಜಿ. ಸಿ. ಕಾಲೇಜು, ಹಳೆಯ ವಿದ್ಯಾರ್ಥಿಗಳ ಸಂಘ, ಅರಣ್ಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಸಸ್ಯಶಾಸ್ತ್ರ ವಿಭಾಗ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ದಿನಕರ ಸಸ್ಯೋಧ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಶ್ಚಿಮ ಘಟ್ಟದ ವಿಶಿಷ್ಟ ಸಸಿಗಳನ್ನು ಸಂಸ್ಥೆಯ ವಿಶಾಲ ಜಾಗೆಯಲ್ಲಿ ನೆಡಲಾಯಿತು. ಟ್ರಸ್ಟಿಗಳಾದ ಕೆ. ವಿ. ಶೆಟ್ಟಿ, ರಂಜಿತ ಪ್ರಧಾನ, ಡಾ. ವಿ. ಎನ್. ನಾಯಕ, ಡಾ. ಕೃಷ್ಣ ಪ್ರಭು, ಕಾಲೇಜಿನ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಎಸ್. ವಿ. ವಸ್ತ್ರದ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಹರಿಪ್ರಸಾದ ದೇಸಾಯಿ ನಿರೂಪಿಸದರೆ, ಎನ್. ಎಸ್. ಎಸ್. ಅಧಿಕಾರಿ ಆರ್. ಪಿ. ಭಟ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಕೃಷ್ಣ ಎ. ಗೌಡ ಹಾಗೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಿ. ವಿ. ನಾಯಕ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.