ಜೋಯಿಡಾ : ತಾಲ್ಲೂಕಿನ ಸಿಂಗರಗಾವ್’ ನಲ್ಲಿ ಅತಿಯಾದ ಮಳೆಯಿಂದಾಗಿ ಭತ್ತದ ಗದ್ದೆಯಲ್ಲಿ ನೀರು ತುಂಬಿ ನಾಟಿ ಮಾಡಿದ ಭತ್ತದ ಸಸಿಗಳು ಮುಳುಗಿ ಸಂಪೂರ್ಣ ಹಾಳಾದ ಘಟನೆ ಇಂದು ಮಂಗಳವಾರ ನಡೆದಿದೆ.
ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಿಂಗರಗಾವ್ ಬಳಿ 25 ಎಕರೆಗೂ ಹೆಚ್ಚಿನ ನಾಟಿ ಮಾಡಿದ ಭತ್ತದ ಗದ್ದೆ ಹಾಳಾಗಿದ್ದು , ಭತ್ತವನ್ನೇ ನಂಬಿಕೊಂಡ ರೈತರಿಗೆ ನಷ್ಟ ಉಂಟಾಗಿದೆ. ಬತ್ತದ ಕೃಷಿಯನ್ನೇ ನಂಬಿಕೊಂಡು ಬದುಕು ನಡೆಸುವ ಇಲ್ಲಿಯ ರೈತರು ಸೂಕ್ತ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಜೋಯಿಡಾ ತಾಲೂಕಿನಲ್ಲಿ ಸಧ್ಯ ಹೆಚ್ಚಿನ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ತಾಲೂಕಿನ ಹಲವೆಡೆ ರಸ್ತೆ ಸಂಪರ್ಕವು ಕಡಿತಗೊಂಡಿದೆ.