ಅಂಕೋಲಾದ ಶಾಂತಿನಿಕೇತನ ದಲ್ಲಿ ಭರತನಾಟ್ಯ ತರಗತಿ ಪ್ರಾರಂಭ

ಅಂಕೋಲಾ : ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ( ರಿ) ಶಿರಸಿ ಹಾಗೂ ಶಾಂತಿನಿಕೇತನ ಟ್ರಸ್ಟ್ ಅಂಕೋಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದಿನಿಂದ ಸಾರ್ವಜನಿಕರಿಗೆ ಭರತನಾಟ್ಯ ತರಗತಿಯನ್ನು ಆರಂಭಿಸಲಾಯಿತು.
ಇದರ ಉದ್ಘಾಟನೆಯನ್ನು ವಂದಿಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ ಜಿ ನಾಯಕ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು “ ಮಕ್ಕಳಿಗೆ ಓದು ಮಾತ್ರ ಮುಖ್ಯವಲ್ಲ.ಇಂದಿನ ಮಕ್ಕಳು ಭರತನಾಟ್ಯದಂತಹ ಕಲೆಯನ್ನು ರೂಢಿಸಿಕೊಳ್ಳಬೇಕು “ ಎಂದರು.
ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ರಾಘವೇಂದ್ರ ಎಸ್ ಹೆಗಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ದಂತ ವೈದ್ಯ ಡಾ.ಸಂಜು ನಾಯಕ ಮಾತನಾಡಿ” ಅಂಕೋಲಾದಲ್ಲಿ ಭರತನಾಟ್ಯಕ್ಕೆ ಪ್ರೋತ್ಸಾಹ ಇದೆ. ನಾವು ಮಕ್ಕಳಲ್ಲಿ ಎಲ್ಲಾ ಕಲೆಗಳನ್ನೂ ಬೆಳೆಸಲು ಪ್ರೋತ್ಸಾಹ ನೀಡಬೇಕು. ಶಾಂತಿನಿಕೇತನ ಯಾವತ್ತೂ ಭರತನಾಟ್ಯಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ.ಶಾಂತಿನಿಕೇತನ ಮತ್ತು ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರಗಳು ಅಂಕೋಲಾದಲ್ಲಿ ಭರತನಾಟ್ಯವನ್ನು ಬೆಳೆಸುವ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತವೆ” ಎಂದರು.
ಶಾಂತಿನಿಕೇತನದ ಕಾರ್ಯದರ್ಶಿಗಳಾದ ಶ್ರೀಮತಿ. ಶಾಂತಿ ಬಿ ನಾಯಕ ಅವರು ಸಾಂದರ್ಭಿಕವಾಗಿ ಮಾತನಾಡಿದರು.
ನೃತ್ಯ ಶಿಕ್ಷಕಿ ವಿದುಷಿ ವಿನುತಾ ಹೆಗಡೆ ಅವರು ಮಾತನಾಡಿ “ ಭರತನಾಟ್ಯ ಕಲಿಯಲು ಆಸಕ್ತಿ ಮುಖ್ಯ. ಅಂತಹ ಆಸಕ್ತಿ ಯನ್ನು ಹೊಂದಿ ಮಕ್ಕಳು ಉತ್ತಮವಾಗಿ ಭರತನಾಟ್ಯ ಕಲಿಯಬಹುದು.ಇದರಿಂದ ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮಗಳು ಉಂಟಾಗುತ್ತವೆ. ಅಂಕೋಲಾದಲ್ಲಿ ಭರತನಾಟ್ಯ ದ ಕಲೆಯನ್ನು ಎಲ್ಲರೂ ಸೇರಿ ಬೆಳೆಸೋಣ “ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಿಮ್ಮಣ್ಣ ಬಿ ನಾಯಕ ಅವರು ಮಾತನಾಡಿ” ಶಾಂತಿನಿಕೇತನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯಾವತ್ತೂ ಪ್ರಯತ್ನಿಸುತ್ತದೆ” ಎಂದರು. ಶಿಕ್ಷಕಿ ಶೀತಲ್ ನಾಯಕ ಅವರು ನಿರ್ವಹಿಸಿದರು.ಶಿಕ್ಷಕಿ ಲಕ್ಷ್ಮಿ ನಾಯಕ ವಂದಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರದ್ಧಾ ಆಚಾರ್ಯ,ಸಂಜೀವಿನಿ ಗಾಂವ್ಕಾರ್, ಶ್ರೀನಂದಾ ಭಟ್ಟ ,ಅರ್ಪಿತಾ ಶೇಡಗೇರಿ ಅವರು ಉಪಸ್ಥಿತರಿದ್ದರು.
ಭರತನಾಟ್ಯ ಶಾಲೆ ಗೆ ಯಾವುದೇ ಮಕ್ಕಳನ್ನು ಸೇರಿಸುವವರು 8971132229 / 8762460386 / 9008769660 ಸಂಪರ್ಕಿಸಬಹುದು.