ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಬುಕ್‌ ಬ್ಯಾಂಕ್‌ಗೆ ಉತ್ತಮ ಸ್ಪಂದನೆ

ಅಂಕೋಲಾ: ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಮಹತ್ವಾಕಾಂಕ್ಷೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಓದುವ ಹವ್ಯಾಸ ಬೆಳೆಸುವ ಉದ್ದೇಶಕ್ಕೆ ಪ್ರಾರಂಭಿಸಲಾದ ಬುಕ್ ಬ್ಯಾಂಕ್ ಯೋಜನೆಗೆ ಪೂರ್ವವಿದ್ಯಾರ್ಥಿಗಳಿಂದ ಸ್ಥಳೀಯ ದಾನಿಗಳಿಂದ ವಿವಿಧ ಕಾಲೇಜುಗಳ ಪ್ರಾಚಾರ್ಯರುಗಳಿಂದ ಅಭೂತಪೂರ್ವ ಸ್ಪಂದನೆ ದೊರಕಿದೆ.

ಬುಕ್ ಬ್ಯಾಂಕ ಯೋಜನೆಗೆ ಪೂರ್ವ ವಿದ್ಯಾರ್ಥಿಗಳು ದಾನಿಗಳು ಸುಮಾರು ರೂ. 60,000/- ಮೌಲ್ಯದ ಸುಮಾರು 350ಕ್ಕೂ ಹೆಚ್ಚು ಪುಸ್ತಕಗಳು, ರೂ.5,000/- ಹಣ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ಯೋಜನೆಗೆ ಕಾರವಾರ: ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ.ಶಿವಾನಂದ ನಾಯಕ, ಜ್ಞಾನಧಾರ ಪ್ರಕಾಶನದ ಮುಖ್ಯಸ್ಥರಾದ ಬಸವರಾಜ ಎಂ.ಎಚ್ ಪುಸ್ತಕಗಳನ್ನು, ಪೂರ್ವ ವಿದ್ಯಾರ್ಥಿಗಳಾದ ಗೋರಿಯಾ ಮೊಸೆಸ್, ಗಣೇಶ ಮುಕ್ರಿ ಹಾಗೂ ಸ್ಥಳೀಯ ಸಹಶಿಕ್ಷಕರಾದ ಜಯಶೀಲ ಆಗೇರ ಹಣದ ಮೂಲಕ ಉತ್ತಮ ಸ್ಪಂದನೆ ನೀಡಿದ್ದಾರೆ. ಹೀಗೆ ಸಹಕರಿಸಿದ ಸರ್ವರಿಗೂ ಸಂಸ್ಥೆಯ ಪರವಾಗಿ ಧನ್ಯವಾದ ಅರ್ಪಿಸಲಾಗಿದೆ ಹಾಗೂ ಮುಂದೆ ಸಹ ಬುಕ್, ಬ್ಯಾಂಕ ನಿರಂತರವಾಗಿ ಮುಂದುವರಿಸಲಾಗುವದು ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ವಿನಾಯಕ ಜಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.