ಹಳಿಯಾಳ : 2023ರ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲು ಕರ್ನಾಟಕ ಸರಕಾರದಿಂದ ಮಂಜೂರಾತಿ ನೀಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಗ್ರಾಮ ಪಂಚಾಯ್ತುಗಳನ್ನು ಮಾವು ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿರುತ್ತದೆ. ಮಾವು ಬೆಳೆಗೆ ವಿಮೆಯನ್ನು ಪಡೆಯಲು ವಿಮಾ ಕಂತು ಪಾವತಿ ಮಾಡಲು ಇದೇ ಜುಲೈ:31 ರಂದು ಕಡೆಯ ದಿನವಾಗಿರುತ್ತದೆ ಎಂದು ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಎ.ಆರ್.ಹೇರಿಯಾಳ ಅವರು ತಿಳಿಸಿದ್ದು, ರೈತರು ಈ ಯೋಜನೆಯ ಭಾಗಿದಾರರಾಗುವಂತೆ ಕೋರಿದ್ದಾರೆ.