ಜುಲೈ: 23 ರಂದು ದಾಂಡೇಲಿಯ ಶೇಖರ್ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರ

ದಾಂಡೇಲಿ : ನಗರದ ಶೇಖರ್ ಆಸ್ಪತ್ರೆಯಲ್ಲಿ ಜುಲೈ:23 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ 1 ರಿಂದ 14 ವರ್ಷ ವಯಸ್ಸಿನ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಚಿಕ್ಕ ಮಕ್ಕಳ ತಜ್ಞರಾದ ಡಾ.ಮಂಜು.ಎಂ. ಇವರು ಭಾಗವಹಿಸಲಿದ್ದು, ಚಿಕ್ಕ ಮಕ್ಕಳಿಗೆ ಉಂಟಾಗುವ ಜ್ವರ, ನೆಗಡಿ, ಕಫ, ಜಾಂಡಿಸ್, ಅಸ್ತಮಾ, ಥೈರಾಯಿಡ್, ಅತೀಸಾರ ಭೇದಿ, ಮೂತ್ರಪಿಂಡ ಸಮಸ್ಯೆ ಹಾಗೂ ಚಿಕ್ಕ ಮಕ್ಕಳ ಇನ್ನಿತರ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ. ಅವಶ್ಯವಿದ್ದಲ್ಲಿ ಚಿಕ್ಕ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಾಗೂ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08284- 233773, ಮೊಬೈಲ್ ಸಂಖ್ಯೆ: 9448817971, 8618716212 ಕ್ಕೆ ಸಂಪರ್ಕಿಸುವಂತೆ ಶೇಖರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶೇಖರ್ ಹಂಚಿನಾಳಮಠ ಮತ್ತು ಚಿಕ್ಕ ಮಕ್ಕಳ ತಜ್ಞರಾದ ಡಾ.ಮಂಜು.ಎಂ ಅವರು ಕೋರಿದ್ದಾರೆ.