ಜೋಯಿಡಾ :ಫಣಸೋಲಿ ವನ್ಯಜೀವಿ ವಲಯದಲ್ಲಿ ವನ್ಯಜೀವಿ ಇಲಾಖೆಯ ವತಿಯಿಂದ ಮುಂದುವರಿದ ಜಂಗಲ್ ಸಫಾರಿ – ಪರಿಸರ ಅಭಿವೃದ್ಧಿ ಸಮಿತಿಯಿಂದ ನಡೆಯುತ್ತಿದ್ದ ಜಂಗಲ್ ಸಫಾರಿಗೆ ಸಧ್ಯಕ್ಕೆ ಬ್ರೇಕ್.

ಜೋಯಿಡಾ : ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಜೋಯಿಡಾ ತಾಲ್ಲೂಕಿನ ಫಣಸೋಲಿ ವನ್ಯಜೀವಿ ವಲಯದಲ್ಲಿ ಪರಿಸರ ಅಭಿವೃದ್ಧಿ ಸಮಿತಿಯ ವತಿಯಿಂದ ನಡೆಸಲಾಗುತ್ತಿರುವ ಜಂಗಲ್ ಸಫಾರಿಯನ್ನು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರ ಆದೇಶದ ಮೇರೆಗೆ ಮೇ:29 ರಿಂದ ಮುಂದಿನ ಆದೇಶ ಬರುವವರೆಗೆ ಸ್ಥಗಿತಗೊಳಿಸಲಾಗಿದ್ದರೂ, ವನ್ಯಜೀವಿ ಇಲಾಖೆಯಿಂದ ಎಂದಿನಂತೆ ಜಂಗಲ್ ಸಫಾರಿಯನ್ನು ನಡೆಸಲಾಗುತ್ತಿದೆ.

ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಜಂಗಲ್ ಸಫಾರಿಯನ್ನು ನಡೆಸುತ್ತಿದ್ದ ಪರಿಸರ ಅಭಿವೃದ್ಧಿ ಸಮಿತಿಯು ಜಂಗಲ್ ಸಫಾರಿಗೆ ಸಂಬಂಧಪಟ್ಟಂತೆ ಇರುವಂತಹ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕಾದ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ ವನ್ಯಜೀವಿ ಇಲಾಖೆಯಿಂದ ಎಂದಿನಂತೆ ಜಂಗಲ್ ಸಫಾರಿ ನಡೆಯುತ್ತಿದ್ದು, ಪ್ರವಾಸಿಗರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.