ಹಳಿಯಾಳ ಪಟ್ಟಣದ ಕ್ರಿಶ್ಚಿಯನ್ ಗಲ್ಲಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಣ ವಂಚನೆ : ದೂರು ದಾಖಲು

ಹಳಿಯಾಳ : ವಾಟ್ಸಪ್, ಟೆಲಿಗ್ರಾಂ ಮೂಲಕ ಬೇರೆ ಬೇರೆ ಹೆಸರಿನಲ್ಲಿ ಚಾಟ್ ಮಾಡಿ, ಬೇರೆ ಬೇರೆ ಯು.ಪಿ.ಐ ಐ.ಡಿಯನ್ನು ಕಳುಹಿಸಿ ಹಣದ ಜೊತೆಗೆ ಕಮೀಶನ್ ಹಣ ಹಾಕುವಂತೆ ನಾಟಕ ಮಾಡಿ ನಂತರ ಹಾಕಿದ ಹಣವನ್ನು ಮರಳಿ ಹಾಕದೆ ಒಟ್ಟು ರೂ:1,45,000/- ರೂಪಾಯಿ ಹಣವನ್ನು ಹಾಕಿಸಿಕೊಂಡು ವಂಚಿಸಿದ ಘಟನೆಯೊಂದು ಹಳಿಯಾಳ ಪಟ್ಟಣದಲ್ಲಿ ನಡೆದಿದೆ.

ಹಳಿಯಾಳ ಪಟ್ಟಣದ ಕ್ರಿಶ್ಚಿಯನ್ ಗಲ್ಲಿಯ ನಿವಾಸಿ ಸುಫಿಯಾನ ಅಹ್ಮದ್ ಅಬ್ದುಲ್ ಖಾದರ್ ಮುನಿಯಾರ್ ಎಂಬವರೇ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಇವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ನಿಡಿದ ದೂರಿನಲ್ಲಿ ತನಗೆ ಬೇರೆ ಬೇರೆ ಹೆಸರಿನಲ್ಲಿ ಚಾಟ್ ಮಾಡಿ, ಬೇರೆ ಬೇರೆ ಯು.ಪಿ.ಐ ಐಡಿಯನ್ನು ಕಳುಹಿಸಿ ತನ್ನಿಂದ ರೂ:1,45,000/- ಹಣವನ್ನು ಪಡೆದು, ಮರಳಿ ನೀಡದೇ ವಂಚಿಸಲಾಗಿದೆ. ಹಣವನ್ನು ಆಶ್ರುಲ್ ಮುಲ್ಲಾ ರೂ:5,000/-, ಓಂ ಕಾರ್ ರೂ:10,000/-, ಸುದರ್ಶನ್ ಎಂಟರಪ್ರೈಸಸ್ ರೂ:50,000/- ಮತ್ತು ಓವಲ್ ಎಂಟರಪ್ರೈಸಸ್ ರೂ:80,000/- ಹೀಗೆ ಒಟ್ಟು ರೂ:1,45,000/- ವನ್ನು ತನ್ನಿಂದ ಬೇರೆ ಬೇರೆ ಯುಪಿಐ ಐಡಿಗೆ ಹಾಕಿಸಿಕೊಂಡು ವಂಚಿಸಲಾಗಿದೆ. ಈ ಬಗ್ಗೆ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಹಳಿಯಾಳ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.