ವಿಶ್ವ ಸ್ಕಿಜೋಪ್ರೀನಿಯಾ ದಿನದ ನಿಮಿತ್ತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ.

ಹಳಿಯಾಳ: ತಾಲ್ಲೂಕಾಡಳಿತ, ಸಾರ್ವಜನಿಕ ಆರೋಗ್ಯ ಇಲಾಖೆ, ತಾಲೂಕು ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಯುಕ್ತ ಆಶ್ರಯದಡಿ ವಿಶ್ವ ಸ್ಕಿಜೋಪ್ರೀನಿಯಾ ದಿನದ ನಿಮಿತ್ತ ಹಳಿಯಾಳ ತಾಲೂಕು ಆಡಳಿತ ಸೌಧದ ಆವರಣದಿಂದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಇಂದು ಬುಧವಾರ ಬೆಳಿಗ್ಗೆ ಚಾಲನೆಯನ್ನು ನೀಡಲಾಯ್ತು.

ಈ ಸಂದರ್ಭದಲ್ಲಿ ತಹಶೀಲ್ದಾರರು, ತಾಲೂಕು ಆರೋಗ್ಯ ವೈದ್ಯಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.