ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರದಲ್ಲಿ ಅನಧಿಕೃತವಾಗಿ ಸರಾಯಿ ಕುಡಿಯಲು ಅವಕಾಶ : ಪೊಲೀಸರಿಂದ ದಾಳಿ

ದಾಂಡೇಲಿ : ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅನಧಿಕೃತವಾಗಿ ಸರಾಯಿಯನ್ನು ಕುಡಿಯಲು ಅನುವು ಮಾಡಿಕೊಟ್ಟ ಸಂದರ್ಭದಲ್ಲಿ ದಾಂಡೇಲಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಅನಧಿಕೃತವಾಗಿ ಮಾರಾಲಿಟ್ಟಿದ್ದ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ನಗರದ ಹಳಿಯಾಳ ರಸ್ತೆಯ ಮೂರು ನಂ ಗೇಟ್ ಹತ್ತಿರ ನಡೆದಿದೆ.

ಹಳಿಯಾಳ ರಸ್ತೆಯ ಮೂರು ನಂ ಗೇಟ್ ಹತ್ತಿರದ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಾತ ದೇವರಾಜ ಎಂಬಾತನು ಸಾರ್ವಜನಿಕರಿಗೆ ಅನಧಿಕೃತವಾಗಿ ಸರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ದಾಂಡೇಲಿ ನಗರ ಠಾಣೆಯ ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿ ಸರಾಯಿ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ದೇವರಾಜ ಮತ್ತು ಅನಧಿಕೃತವಾಗಿ ಅಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ