ಜೈನ ಮುನಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಹಳಿಯಾಳ ಪಟ್ಟಣದಲ್ಲಿ ಪ್ರತಿಭಟನೆ

ಹಳಿಯಾಳ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತದಲ್ಲಿರುವ ಜೈನ ಮಂದಿರದ ಮುನಿ ಮಹಾರಾಜರಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಹಳಿಯಾಳ ತಾಲ್ಲೂಕಿನ ಜೈನ ಸಮಾಜ ಬಾಂಧವರು ತೀವ್ರವಾಗಿ ಖಂಡಿಸಿ ಹಳಿಯಾಳ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಆರಂಭದಲ್ಲಿ ಹಳಿಯಾಳ ಪಟ್ಟಣದ ಶ್ರೀ.ಗಣೇಶ ಕಲ್ಯಾಣ ಮಂಟಪದ ಮುಂಬಾಗದಿಂದ ಮೌನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೌನ ಮೆರವಣಿಗೆಯು ಪಟ್ಟಣದಲ್ಲಿರುವ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಸಂಪನ್ನಗೊಂಡಿತು. ಆನಂತರ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮುನಿ ಮಹಾರಾಜರಿಗೆ ಸೂಕ್ತ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಾರ್ಯಾಲಯದ ಮೂಲಕ ಸಲ್ಲಿಸಲಾಯ್ತು.

ಈ ಸಂದರ್ಭದಲ್ಲಿ ಜೈನ ಸಮಾಜದ ಪ್ರಮುಖರುಗಳಾದ ಧರಣೇಂದ್ರ ಶಾಸ್ತ್ರೀ ದೊಡ್ಡ ಜೈನ್, ಅನಂತ ತಿರ್ಗಾಪುರ, ಮನೋಜ್ ಚಿಣಗಿ, ಅನಿಲ್ ದೊಡ್ಡಜೈನ್, ಅಮಿತ್ ಪಂಡಿತ್, ಪ್ರದೀಪ್ ಅಂಬಿಪ್ಪಿ, ಪ್ರವೀಣ್ ಪಾಟೀಲ್, ಸಂದೇಶ್ ಪಾಟೀಲ್, ಮುದುಕಪ್ಪ ಮುನವಳ್ಳಿ, ಅಜೀತ್ ಲಕ್ಕನಗೌಡರ್, ಚೇತನ್ ದೇಸಾಯಿ, ಸುರೇಶ್ ದೇಸಾಯಿ, ಕಲ್ಪನಾ ಪಾಟೀಲ್, ಮಯ್ಯೂರಿ ಹೆಬ್ರಿ, ರೇಖಾ ತಿರ್ಗಾಪುರ್, ಸುಧಾ ದೊಡ್ಡಜೈನ್ ಹಾಗೂ ಜೈನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.