ಸಿದ್ದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಸಿದ್ದಾಪುರ ತಾಲೂಕು, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕಾನಸೂರು ಹಾಗೂ ಶ್ರೀ ಕಾಳಿಕಾ ಭವಾನಿ ಪ್ರೌಢ ಶಾಲೆ ಕಾನಸೂರು ಇವರ ಸಹಕಾರದೊಂದಿಗೆ ಶ್ರೀ ಕಾಳಿಕಾ ಭವಾನಿ ಪ್ರೌಢ ಶಾಲೆಯಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮವನ್ನು ಜಿಲ್ಲಾ ಜನಜಾಗ್ರತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಸುಭಾಸ್ ನಾಯ್ಕ್ ರವರು ದೀಪವನ್ನು ಬೆಳಗಿಸಿ ಮತ್ತು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆಯನ್ನು ನೀಡಿ , ಮಕ್ಕಳು ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ ದಿನ ಹಾಗೂ ತಮ್ಮ ಹುಟ್ಟಿದ ಹಬ್ಬದ ದಿನ ಗಿಡ ನೆಟ್ಟು ಪೋಷಿಸಿ, ರಕ್ಷಿಸಿ ಪರಿಸರ ಸಂರಕ್ಷಣೆ ಮಾಡಬೇಕು.ಪರಿಸರ ಮನುಷ್ಯನಿಗೆ ಎಲ್ಲವನ್ನು ನೀಡಿದೆ. ಆದರೆ ಮನುಷ್ಯ ಪರಿಸರ ಕ್ಕಾಗಿ ಏನನ್ನು ನೀಡಿಲ್ಲ. ಪರಿಸರ ನಾಶದಿಂದ ಅತಿವೃಷ್ಟಿ, ಅನಾವೃಷ್ಟಿ ಆಗುತ್ತಿದೆ. ಪರಿಸರ ಇದ್ದರೆ ಮಾತ್ರ ನಮ್ಮ ಬದುಕು, ಪರಿಸರ ರಕ್ಷಣೆ ಮಾಡಬೇಕಾದುದು ಪ್ರತಿಯೊಬ್ಬರ ಕರ್ತ್ಯವ್ಯ ಹಾಗಾಗಿ ನಾವೆಲ್ಲರೂ ಗಿಡ ನೆಟ್ಟು ಪರಿಸರ ಸಂರಕ್ಷಿಸುವುದರೊಂದಿಗೆ , ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಬೇಕು ಎಂದು ಜಾಗೃತಿ ಮೂಡಿಸಿದರು
ಕಾರ್ಯಕ್ರಮ ದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಪ್ರಭಾಕರ ನಾಯ್ಕ್ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕಿ ನಿತ್ಯಲಕ್ಷ್ಮಿ ಅವರು ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯಾಧ್ಯಾಪಕಿ ಮೀನಾ ಬೋರ್ಕರ, ಕಾನಸೂರು ಅರಣ್ಯಧಿಕಾರಿಯಾದ ವಿ ಟಿ ನಾಯ್ಕ್ , ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಶಾನಭಾಗ , ಶಾಲಾ ಶಿಕ್ಷಕರು, ಮೇಲ್ವಿಚಾರಕರಾದ ವೀಣಾ, ಒಕ್ಕೂಟದ ಕಾರ್ಯದರ್ಶಿ ಯಮುನಾ , ಸೇವಾಪ್ರತಿನಿಧಿ ದಿನಕರ್, ಅಕ್ಷಯ, ಸಂಘದ ಸದಸ್ಯರು, ಶಾಲಾ ಮಕ್ಕಳು, ಪೋಷಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.