ಅಂಕೋಲಾ: ವಿದ್ಯಾವಂತ ಯುವಕರನ್ನು ಒಳಗೊಂಡ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಸಂಘಟನೆಯ ತಾಲ್ಲೂಕು ಘಟಕ ರಚನೆ

ಅಂಕೋಲಾ: ಯುವಶಕ್ತಿ ರಾಷ್ಟ್ರದ ಶಕ್ತಿ. ಯುವಕರೇ ದೇಶದ ಬೆನ್ನೆಲುಬು. ಯುವಶಕ್ತಿಯ ಸದ್ಬಳಕೆಗೆ ಸಂಘಟನೆ ಅವಶ್ಯ. ಸಂಘಟನೆ ರೂಪ ಪಡೆದು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ಎಂಬ ಸದುದ್ದೇಶದಿಂದ ಜನ್ಮ ತಳದಿದ್ದ ಅನೇಕ ಯುವ ಸಂಘಟನೆಗಳು ಇಂದು ಮರೆಯಾಗುತ್ತಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕಿರಣ್ ಗಾಂವಕರ ಹೇಳಿದರು.
ಅಂಕೋಲಾ ತಾಲೂಕಿನ ನೂತನ ಘಟಕವನ್ನು ರಚನೆ ಮಾಡಿ ಅವರು ಮಾತನಾಡಿದರು.
ಅಮಾಯಕ, ಬಡ ಕೂಲಿ ಕಾರ್ಮಿಕ ಜನರಿಗೆ ಸರ್ಕಾರಿ ಯೋಜನೆಗಳ ತಿಳುವಳಿಕೆ ನೀಡುವುದು, ಅನ್ನ ಆಹಾರ ಇಲ್ಲದ ಭಿಕ್ಷುಕರಿಗೆ ಮಾನವೀಯತೆ ತೋರಿಸಿ ಸಹಾಯ ಹಸ್ತ ನೀಡಲು ಮಾನವ ಹಕ್ಕು ರಕ್ಷಣಾ ಪರಿಷತ್ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ. ಮಾನವ ಹಕ್ಕುಗಳ ರಕ್ಷಣಾ ಪರಿಷತ್ನ ರಾಜ್ಯ ಘಟಕ ಶಿರಸಿಯಲ್ಲಿದ್ದು ಗಣೇಶ್ ನಾಯ್ಕ್ ರವರು ರಾಜ್ಯಾಧ್ಯಕ್ಷರಾಗಿದ್ದಾರೆ.ಇವರ ಸಮ್ಮತಿಯೊಂದಿಗೆ ಅಂಕೋಲಾ ತಾಲೂಕು ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು .

ಮಾನವ ಹಕ್ಕುಗಳ ರಕ್ಷಣಾ ಪರಿಷತ್ ತಾಲೂಕು ಅಧ್ಯಕ್ಷರಾಗಿ ಸುರಜ್ ನಾಯ್ಕ್ ಶಿರೂರು, ಉಪಾಧ್ಯಕ್ಷರಾಗಿ ಹರೀಶ್ ನಾಯ್ಕ್ ಶೇಡಿಕುಳಿ, ಮಹಿಳಾ ಉಪಾಧ್ಯಕ್ಷರಾಗಿ ಸುಪ್ರಿಯಾ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಗೌಡ, ಸಹ ಕಾರ್ಯದರ್ಶಿಯಾಗಿ ರಘುನಾಥ ನಾಯ್ಕ್, ಖಜಾಂಚಿಯಾಗಿ ಸುಭಾಷ್ ನಾಯ್ಕ, ಮುಖ್ಯ ಸಂಘಟನಾ ಕಾರ್ಯದರ್ಶಿಯಾಗಿ ನಾಗಪ್ಪ ಹರಿಕಾಂತ, ಪತ್ರಿಕಾ ಮಾಧ್ಯಮದ ಸದಸ್ಯರಾಗಿ ಐಶ್ವರ್ .ನಾಯ್ಕ, ಸಹ ಸಂಘಟನಾ ಕಾರ್ಯದರ್ಶಿಯಾಗಿ ವಿವೇಕ್ ಐಗಳ. ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ನಾಯ್ಕ್, ಅಶೋಕ್ ಬಂಟ, ಉದಯ್ ಗೌಡರವರನ್ನು ಆಯ್ಕೆ ಮಾಡಲಾಗಿದೆ.