ದಾಂಡೇಲಿ : ನಗರದ ಹಳೆದಾಂಡೇಲಿಯ ದೇಶಪಾಂಡೆ ನಗರದ ನಿವಾಸಿಯಾಗಿರುವ ವಿವಾಹಿತ ವ್ಯಕ್ತಿಯೋರ್ವ ನಾಪತ್ತೆಯಾದ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಶಪಾಂಡೆ ನಗರದ ನಿವಾಸಿ 30 ವರ್ಷ ವಯಸ್ಸಿನ ಕುಮಾರಸ್ವಾಮಿ ಫಕೀರಯ್ಯಾ ಹೊಸಮಠ ಎಂಬಾತನೇ ನಾಪತ್ತೆಯಾದ ವಿವಾಹಿತ ವ್ಯಕ್ತಿಯಾಗಿದ್ದಾನೆ. ಟೀ ಅಂಗಡಿಗೆ ಹೋಗಿ ಬರುತ್ತೇನೆಂದು ಜುಲೈ: 07 ರಂದು ಮನೆಯಿಂದ ಹೋದವನು ಈವರೇಗೆ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಈವರೇಗೆ ಮನೆಯವರೆಲ್ಲ ಹುಡುಕಾಡಿದರೂ ಎಲ್ಲಿಯೂ ಸಿಕ್ಕಿರುವುದಿಲ್ಲ. ಈ ಬಗ್ಗೆ ನಾಪತ್ತೆಯಾಗಿರುವ ಕುಮಾರಸ್ವಾಮಿ ಫಕೀರಯ್ಯಾ ಹೊಸಮಠ ಈತನ ಪತ್ನಿ ವಿದ್ಯಾ ಅವರು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ನಗರ ಠಾಣೆಯ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.