ಟರ್ಮಿನಲ್ 2 ರಿಂದ ಸೆಪ್ಟೆಂಬರ್ 1 ರಂದು ಎಲ್ಲಾ ವಿದೇಶಿ ವಿಮಾನಗಳು ಅಲ್ಲಿಂದಲೆ ಕಾರ್ಯಾರಂಭ ಮಾಡಲಿದ್ದು ವಿಶಾಲ ಪ್ರದೇಶದಲ್ಲಿ ಟರ್ಮಿನಲ್ ನಿರ್ಮಾಣವಾಗಿರುವ ಕಾರಣ ಯಾವುದೇ ಸಂಚಾರದಟ್ಟಣೆಯಿಲ್ಲದೆ ಜನ ವಿದೇಶಗಳತ್ತ ಪ್ರಯಾಣ ಬೆಳೆಸಲಿದ್ದಾರೆ.
2008 ರಲ್ಲಿ 22 ಸಾವಿರ ಜನರ ಅನುಕೂಲಕ್ಕೆ ಅಂತ ಮಾಡಿದ್ದ ಕೆಐಎಬಿ ಟರ್ಮಿನಲ್ 1 ರಲ್ಲಿ 30 ಸಾವಿರಕ್ಕೂ ಅಧಿಕ ಜನರ ಸಂಚಾರದಿಂದಾಗಿ ಸಾಕಷ್ಟು ಸಮಸ್ಯೆಯಾಗ್ತಿತ್ತು. ಹೀಗಾಗಿ ಪ್ರಯಾಣಿಕರ ಸಮಸ್ಯೆ ಬಗೆಹರಿಸಲು ಮುಂದಾದ ಕೆಐಎಬಿ ಇದೀಗ ನೂತನ ಟರ್ಮಿನಲ್ ಕಾರ್ಯಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದು ಕೆಲವೇ ದಿನಗಳಲ್ಲಿ ಗಾರ್ಡನ್ ಟರ್ಮಿನಲ್ ಜನರ ಪ್ರಯಾಣಕ್ಕೆ ಸಿಗಲಿದೆ. ಕ್ರೌಡ್ ಕ್ರೌಡ್ ಕ್ರೌಡ್ ಗೇಟ್ ಮುಂದೆಯೂ ಜನ, ಅಂಗಡಿಮುಂಗಟ್ಟುಗಳ ಮುಂದೆಯೂ ಜನವೋ ಜನ… ನೂರಲ್ಲ ಇನ್ನೂರಲ್ಲ ಸಾವಿರಾರು ಜನರು ಇದೇ ರೀತಿ ವೀಕೆಂಡ್ ಬಂತು ಅಂದ್ರೆ ಸಾಕು ಟರ್ಮಿನಲ್ ಮುಂಭಾಗ ನಿಂತು ಪರದಾಡುವ ದೃಶ್ಯ KIAL -Bengaluru airport ಸರ್ವೆಸಾಮಾನ್ಯವಾಗಿ ಫ್ಲೈಟ್ ಮಿಸ್ ಆಗಿ ಸಾಕಷ್ಟು ಜನ ಆಡಳಿತ ಮಂಡಳಿ ವಿರುದ್ದ ಕಿಡಿಕಾಡ್ತಿದ್ದರು. ಆದ್ರೆ ಇದೀಗ ಈ ಸಮಸ್ಯೆಗೆ ಏರ್ಪೋರ್ಟ್ ಆಡಳಿತ ಮಂಡಳಿ ಮುಕ್ತಿ ನೀಡಲು ಮುಂದಾಗಿದ್ದು ಗಾರ್ಡನ್ ಟರ್ಮಿನಲ್ ಆಕ್ಟೀವ್ ಮಾಡ್ತಿದ್ದಾರೆ.
ಅಂದಹಾಗೆ ಕಳೆದ 2022 ರ ನವಂಬರ್ ನಲ್ಲಿ ಪ್ರಧಾನಿ ಮೋದಿಯಿಂದ ಉದ್ಘಾಟನೆಯಾಗಿದ್ದ ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನ ನಿಲ್ಥಾಣದ ಟರ್ಮಿನಲ್ 2 ಸಂಪೂರ್ಣ ಕಾರ್ಯಾರಂಭ ಮಾಡಿರಲಿಲ್ಲ. ಹೀಗಾಗಿ ಪ್ರತಿನಿತ್ಯ 30ಕ್ಕೂ ಅಧಿಕ ಸಾವಿರ ಜನರು ಟರ್ಮಿನಲ್ 1 ರಿಂದಲೆ ಪ್ರಯಾಣ ಮಾಡ್ತಿದ್ದು ಟರ್ಮಿನಲ್ ಕಿರಿದಾಗಿದ್ದ ಕಾರಣ ಜನ ಸಮಯಕ್ಕೆ ಸರಿಯಾಗಿ ಚೆಕ್ ಇನ್ ಆಗಲು ಸಾಧ್ಯವಾಗ್ತಿರಲಿಲ್ಲ.
ಅಲ್ಲದೆ ಗೇಟ್ ನಲ್ಲಿ ಚೆಕಿಂಗ್ ಮತ್ತು ಬೋರ್ಡಿಂಗ್ ಪಾಸ್ ಪಡೆದು ಚೆಕ್ ಇನ್ ಆಗಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದ ಕಾರಣ ಜನರು ಸಮಯಕ್ಕೆ ಸರಿಯಾಗಿ ಫ್ಲೈಟ್ ಸಿಗದೆ ಪರದಾಡ್ತಿದ್ರು. ಹೀಗಾಗಿ ಇದೆಲ್ಲವನ್ನೂ ಮನಗಂಡ ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನ ನಿಲ್ಥಾಣದ ನೂತನ ಗಾರ್ಡನ್ ಟರ್ಮಿನಲ್ 2 ಅನ್ನ ಸೆಪ್ಟೆಂಬರ್ 1 ರಿಂದ ಕಾರ್ಯಾರಂಭ ಮಾಡಲು ನಿರ್ಧರಿಸಿದೆ. ಟರ್ಮಿನಲ್ 2 ರಿಂದ ಸೆಪ್ಟೆಂಬರ್ 1 ರಂದು ಎಲ್ಲಾ ವಿದೇಶಿ ವಿಮಾನಗಳು ಅಲ್ಲಿಂದಲೆ ಕಾರ್ಯಾರಂಭ ಮಾಡಲಿದ್ದು ವಿಶಾಲ ಪ್ರದೇಶದಲ್ಲಿ ಟರ್ಮಿನಲ್ ನಿರ್ಮಾಣವಾಗಿರುವ ಕಾರಣ ಯಾವುದೇ ಸಂಚಾರದಟ್ಟಣೆಯಿಲ್ಲದೆ ಜನ ವಿದೇಶಗಳತ್ತ ಪ್ರಯಾಣ ಬೆಳೆಸಲಿದ್ದಾರೆ.
ಹೊಸ ಟರ್ಮಿನಲ್ ಗೆ ಸೆಪ್ಟೆಂಬರ್ 1 ರಿಂದ ವಿದೇಶಿ ವಿದೇಶಿ ವಿಮಾನಗಳು ಆಗಲಿರುವ ಕಾರಣ ಟರ್ಮಿನಲ್ ಒಂದರಲ್ಲಿ ಈಗಿರುವ ಜನದಟ್ಟಣೆ ಕಡಿಮೆಯಾಗಲಿದೆ. ಅಲ್ಲದೆ ಕೇವಲ ದೇಶಿಯ ವಿಮಾನಗಳ ಹಾರಾಟ ಮಾತ್ರ ಹಳೆಯ ಟರ್ಮಿನಲ್ 1 ರಿಂದ ನಡೆಯಲಿದ್ದು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಚೆಕ್ ಇನ್ ಆಗಲು ಸಾಧ್ಯವಾಗಲಿದೆ.
ಇನ್ನು ಹೊಸ ಟರ್ಮಿನಲ್ ಗೆ ವಿದೇಶಿ ಫ್ಲೈಟ್ ಗಳು ಶಿಫ್ಟ್ ಆದ ನಂತರ ಹಳೆ ಟರ್ಮಿನಲ್ ಅನ್ನು ಹಂತಹಂತವಾಗಿ ನವೀಕರಣ ಮಾಡುವ ಯೋಜನೆಯನ್ನು ಕೆಐಎಬಿ ಆಡಳಿತ ಮಂಡಳಿ ಮಾಡಿದೆ. ನೂತನ ಟಿ2 ನಂತೆ ಟಿ1 ಅನ್ನು ಸಹ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗಾರ್ಡನ್ ಟರ್ಮಿನಲ್ ಆಗಿ ಮಾರ್ಪಾಡು ಮಾಡಲಿದ್ದು ಇಷ್ಟು ದಿನ ಸಂಚಾರ ದಟ್ಟಣೆ, ಜನಸಂದಣಿಯಿಂದ ಪರದಾಡ್ತಿದ್ದ ಪ್ರಯಾಣಿಕರು ನೂತನ ಟರ್ಮಿನಲ್ ಸಂಪೂರ್ಣ ಕಾರ್ಯಾರಂಭ ಮಾಡ್ತಿರುವುದಕ್ಕೆ ಸಂತಸ ವ್ಯಕ್ತಪಪಡಿಸಿದ್ದಾರೆ.
ಒಟ್ಟಾರೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ನೂತನ ಗಾರ್ಡನ್ ಟರ್ಮಿನಲ್ ಸಂಪೂರ್ಣ ಬಳಕೆಗೆ ಸಿದ್ದವಾಗ್ತಿದ್ದು ಹೊಸ ಗಾರ್ಡನ್ ಮೂಲಕ ವಿದೇಶಿ ಪ್ರಯಾಣ ಮಾಡಲು ಪ್ರಯಾಣಿಕರು ಸಹ ಸಜ್ಜಾಗಿದ್ದಾರೆ.