ಮುರುಘಾ ಮಠದ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬೇಡಿ: ಹೈಕೋರ್ಟ್​ ಸೂಚನೆ

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಚೆಕ್ ಹಾಗೂ ಇತರ ದಾಖಲೆಗಳಿಗೆ ಸಹಿ ಹಾಕಲು ಅವಕಾಶ ನೀಡುವಂತೆ ಕೋರಿ ಮುರುಘಾ ಶ್ರೀಗಳ ಪರ ವಕೀಲ ಸಂದೀಪ್ ಪಾಟೀಲ್ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.

ಮುರುಘಾ ಶ್ರೀಗಳು ಚೆಕ್ ಗಳಿಗೆ ಸಹಿ ಹಾಕದಿದ್ದರೆ ಮಠದ ಸಿಬ್ಬಂದಿ ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ಪಾವತಿ ಹಾಗೂ ಇತರ ಖರ್ಚುಗಳಿಗೆ ಸಮಸ್ಯೆಯಾಗಲಿದೆ. ಸಿಬ್ಬಂದಿಗಳಿಗೆ ವೇತನ ನೀಡಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಾದ ಆಲಿಸಿದ ಹೈಕೋರ್ಟ್ ನಿಮ್ಮ ಸಮಸ್ಯೆಗಳಿಗೆ ಸಿಬ್ಬಂದಿಗಳನ್ನು ಉಪವಾಸಕ್ಕೆ ದೂಡಬೇಡಿ. ಮುರುಘಾ ಶ್ರೀಗಳ ಬಂಧನಕ್ಕೆ ಮೊದಲು ಹೇಗೆ ಸಂಬಳ, ಖರ್ಚುವೆಚ್ಚ ನಿಭಾಯಿಸಲಾಗುತ್ತಿತ್ತು ಎಂಬ ಬಗ್ಗೆ ವಿವರವಾದ ಮಾಹಿತಿ ಇರುವ ಮೆಮೊ ಸಲ್ಲಿಸಿ ಎಂದು ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.