‘ನಾಲಿಗೆ ಕಟ್ ಮಾಡ್ತೀನಿ’ ಎಂದು ಕೆ.ಎಸ್ ಈಶ್ವರಪ್ಪಗೆ ಅನಾಮಧೇಯ ಬೆದರಿಕೆ ಪತ್ರ.! ಪತ್ರದಲ್ಲೇನಿದೆ.? ಈಶ್ವರಪ್ಪ ಹೇಳಿದ್ದೇನು.?

ಶಿವಮೊಗ್ಗ: ಅನಾಮಧೇಯ ಬೆದರಿಕೆ ಪತ್ರದ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಟಿಪ್ಪು ಸುಲ್ತಾನ್ ಗೆ ಮುಸ್ಲಿಂ ಗೂಂಡಾ ಅಂತಾ ಕರೆದಿದ್ದೇನೆ ಅಂತಾ ಉಲ್ಲೇಖ ಮಾಡಿದ್ದಾರೆ. ನಾಲಿಗೆ ಕಟ್ ಮಾಡುತ್ತೇನೆ ಅಂತಾ ಬರೆದಿದ್ದಾರೆ. ಈ ರೀತಿ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ ಬಗ್ಗಲ್ಲ ಎಂದರು.

ಇನ್ನು ಈ ಬಗ್ಗೆ ತನಿಖೆ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದೇನೆ. ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ, ವಿಶ್ವಾಸ ಇದೆ. ಈ ಪತ್ರ ಬರೆದಿರೋದು ನಮ್ಮ ರಾಜ್ಯದಿಂದಲೇ ಬಂದಿರೋದು. ಹೆಚ್ಚಿನ ಭದ್ರತೆ ಅವಶ್ಯಕತೆ ಇಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.