ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಕಂಡಕAಡಲ್ಲಿ ಬೀದಿ ನಾಯಿಗಳು ದಾಳಿ ಮಾಡ್ತಿದ್ದು ಮನೆಯಿಂದ ಹೊರ ಬರಲು ಜನ ಭಯ ಪಡುವಂತಾಗಿದೆ.
ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲೂ ಬೌಬೌ ಕಾಟ.!
ಒಂದೇ ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿರುವ ಕೇಸ್‌ಗಳು ವರದಿಯಾಗಿದೆ. ಅಲ್ಲದೇ ನಿತ್ಯ ಸರಾಸರಿ 70ಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿಗಳ ಅಟ್ಟಹಾಸದಿಂದ ಆಸ್ಪತ್ರೆ ಸೇರುತ್ತಿದ್ದಾರೆ.
ಸಿಕ್ಕಸಿಕ್ಕಲ್ಲಿ ದಾಳಿ ಮಾಡ್ತಿವೆ ಬೀದಿ ನಾಯಿಗಳು.!
2020ರಿಂದ ಇಲ್ಲಿಯವರೆಗಿನ ಅಂಕಿ ಅಂಶಗಳನ್ನ ನೋಡಿದರೆ ನೀವು ಬೆಚ್ಚಿಬೀಳೋದು ಗ್ಯಾರೆಂಟಿ. ಹೌದು.! 2020 ರಿಂದ ಇಲ್ಲಿಯವರೆಗೆ ಸುಮಾರು 52 ಸಾವಿರಕ್ಕೂ ಹೆಚ್ಚು ಜನರಿಗೆ ಶ್ವಾನ ಕಡಿತದಿಂದ ಆಸ್ಪತ್ರೆ ಸೇರಿದ ಮಾಹಿತಿ ಲಭ್ಯವಾಗಿದೆ.
ಜನರ ಸುರಕ್ಷತೆ ದೃಷ್ಟಿಯಿಂದ ಬೀದಿನಾಯಿ ಹಾವಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಮಾತ್ರ ಕಂಡೂ ಕಾಣದಂತಿರುವುದು ದುರಾದೃಷ್ಟವೇ ಸರಿ.! ಇನ್ನು ಪಾಲಿಕೆಯೇ ನೀಡಿದ ಲೆಕ್ಕಾಚಾರದ ಪ್ರಕಾರ ನಗರದಲ್ಲಿ 3 ಲಕ್ಷ ಕ್ಕೂ ಹೆಚ್ಚು ಬೀದಿ ನಾಯಿಗಳಿವೆ.
ಯಾವ ತಿಂಗಳು ಎಷ್ಟು ನಾಯಿ ಕಡಿತ ಪ್ರಕರಣ ದಾಖಲು.?
ಜನವರಿ – 1677
ಫೆಬ್ರವರಿ – 1135
ಮಾರ್ಚ್ – 1800
ಏಪ್ರಿಲ್ – 1677
ಮೇ – 1841
ಜೂನ್ – 1140
ಜುಲೈ – 483
ಈ ವರ್ಷದ ಜನವರಿಯಿಂದ ಲೆಕ್ಕ ಹಾಕಿದರೆ ಇದುವರೆಗೂ ಬೀದಿನಾಯ ಕಡಿತದಿಂದ 9 ಸಾವಿರಕ್ಕಿಂತಲೂ ಅಧಿಕ ಮಂದಿ ಆಸ್ಪತ್ರೆಗಳಿಗೆ ತೆರಳಿದ್ದಾರೆ.
ಬೀದಿ ನಾಯಿಗಳ ಹಾವಳಿ ತಡೆಗೆ ಹಣ ಖರ್ಚು ಮಾಡುತ್ತಿರೋ ಪಾಲಿಕೆ.!
ಒಟ್ಟಾರೆ ಬೀದಿನಾಯಿಗಳ ಹಾವಳಿ ತಡೆಯಲು ಪಾಲಿಕೆ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದೆ. ಆದರೆ ಆ ಹಣ ಯಾವುದಕ್ಕೆ ಖರ್ಚಾಗುತ್ತಿದೆಯೋ ಅಧಿಕಾರಿಗಳಿಗೇ ಗೊತ್ತು. ಬೌಬೌ ಕಾಟದಿಂದ ಮಹಾನಗರದ ಜನತೆಯಂತೂ ಮುಕ್ತವಾಗಿಲ್ಲ. ಇನ್ನದರೂ ಪಾಲಿಕೆ ಇತ್ತ ಗಮನ ಹರಿಸಿ ಸಂಕಷ್ಟದಿಂದ ಜನರನ್ನು ಪಾರುಮಾಡಬೇಕಿದೆ.