ಕಾಣದಂತೆ ಮಾಯವಾಯ್ತು ಚಿರತೆ.! 24 ದಿನಗಳ ನಿರಂತರ ಕಾರ್ಯಾಚರಣೆ.! ಚಿತಾ ಎಲ್ಲೋಯ್ತು.?!

ಬೆಳಗಾವಿ: ನಗರದ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆಯ ಶೋಧಕಾರ್ಯ 24 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಚಿರತೆಯ ಪತ್ತೆ ಮಾತ್ರ ಇನ್ನೂ ಆಗಿಲ್ಲ. ಹಾಗಾಗಿ ಅರಣ್ಯ ಇಲಾಖೆಯು ಚಾಲಾಕಿ ಚಿರತೆಯ ಶೋಧಕ್ಕಾಗಿ ಬೇರೆಯ ಪ್ಲ್ಯಾನ್ ಮಾಡಿದೆ.

ಇಷ್ಟುದಿನ ವಿವಿಧ ರೀತಿಯಲ್ಲಿ ಶೋಧ ನಡೆಸಿದರೂ ಚಿರತೆಯ ಸುಳಿವು ಸಿಗದ ಹಿನ್ನೆಲೆ ಎರಡು ದಿನ ಕೇವಲ ಆಪರೇಷನ್ ಗಜಪಡೆ ನಡೆಸಲು ನಿರ್ಧಾರವನ್ನು ಅರಣ್ಯ ಇಲಾಖೆ ತೆಗೆದುಕೊಂಡಿದೆ. ಚಿರತೆಗೆ ಡಿಸ್ಟರ್ಬ್ ಮಾಡದೇ ಸೆರೆಹಿಡಿಯಲು ಪ್ಲ್ಯಾನ್ ಮಾಡಿರುವ ಇಲಾಖೆಯವರು ಇಷ್ಟು ದಿನ ಅಳವಡಿಸಿದ್ದ ಸ್ಥಳ ಬಿಟ್ಟು ಬೇರೆಡೆ 8 ಸಾಮಾನ್ಯ ಬೋನು,1 ದೊಡ್ಡ ಬೋನು ಮತ್ತು 23 ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಿದೆ.

ನಿನ್ನೆ 300 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಮೈದಾನದ 250 ಎಕರೆ ಪ್ರದೇಶದ 75 ಪರ್ಸೆಂಟ್ ಪ್ರದೇಶವನ್ನು ಕೂಂಬಿಂಗ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಪತ್ತೆಯಾದ ಚಿರತೆಯ ಹೆಜ್ಜೆ ಗುರುತಿನ ಸುತ್ತಮುತ್ತ ಟ್ರ್ಯಾಪ್ ಕ್ಯಾಮರಾ, ಬೋನುಗಳ ಅಳವಡಿಕೆ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ನಂತರ ಕಾರ್ಯಾಚರಣೆಗೆ ಸ್ವಲ್ಪ ತೊಂದರೆ ಉಂಟಾಗಿತ್ತು, ಆದ್ದರಿಂದ ಭಾನುವಾರವೂ ಕೂಡ ಈ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಸಲಾಗಿದೆ ಎಂದು ಡಿಎಫ್ಒ ಆ್ಯಂಥೋನಿ ಮರಿಯಪ್ಪ ತಿಳಿಸಿದ್ದಾರೆ.