ಶಿಕ್ಷಣ ಉಳ್ಳವರ ಸ್ವತ್ತಲ್ಲ, ಅದು ಸಮಾಜದ ಕಡು ಬಡವರ ಸ್ವತ್ತು – ಕೋಟಾ ಶ್ರೀನಿವಾಸ ಪೂಜಾರಿ

ಭಟ್ಕಳ: ಶಿಕ್ಷಣ ಎಂಬುವುದು ಉಳ್ಳವರ ಸ್ವತ್ತಲ್ಲ. ಅದು ಸಮಾಜದ ಕಡು ಬಡವರ ಸ್ವತ್ತು ಎಂದು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು ಅವರು ಹೆಬಳೆಯಲ್ಲಿ ನಿರ್ಮಾಣವಾದ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ವಸತಿ ಶಾಲೆಯ 14 ಮಕ್ಕಳು ಐ.ಐ.ಟಿ ಮತ್ತು ಐ.ಎ.ಎಂ ಸಮನಾದಂತಹ ಶಿಕ್ಷಣ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. ಆದರೆ ಕೆಲ ಬಡ ಮಕ್ಕಳಿಗೆ ಹಣದ ಕೊರತೆ ಇರುತ್ತದೆ. ಅದಕ್ಕಾಗಿ ಈ ವರ್ಷದಿಂದ ಐ.ಐ.ಟಿ ಮತ್ತು ಐ.ಎ.ಎಂ ಸಹಿತ ಉನ್ನತ ಶಿಕ್ಷಣ ಸಂಸ್ಥೆಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೋ ಅಂತವರಿಗೆ ನಮ್ಮ ಇಲಾಖೆ ಪೂರ್ಣ ಖರ್ಚನ್ನು ಭರಿಸುತ್ತದೆ ಎಂದರು.

ಮುಂದಿನ ವರ್ಷದಿಂದ ನಮ್ಮ ಇಲಾಖೆಯಲ್ಲಿ 500ಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳಿಗೆ ಬಡ ಮಕ್ಕಳನ್ನು ಕಳುಹಿಸುವ ತೀರ್ಮಾನ ಮಾಡಿದ್ದೇವೆ. ಸ್ಮಶಾನದಲ್ಲಿ ಕೆಲಸ ಮಾಡುವವರು, ಪೌರ ಕಾರ್ಮಿಕರ ಮಕ್ಕಳು, ಏಡ್ಸ್ ಪೀಡಿತರ ಮಕ್ಕಳು ಹಾಗೂ ಪ್ರಥಮ ಬಾರಿಗೆ ವಿಧವೆಯರ ಮಕ್ಕಳಿಗೆ ಮುಂದಿನ ವರ್ಷದಿಂದ ಪ್ರತಿಷ್ಠಿತ ಶಾಲೆಗಳಿಗೆ ಕಳುಹಿಸಲು ತೀರ್ಮಾನ ಮಾಡಿದ್ದೇವೆ ಎಂದರು.