ಕುಮಟಾ: ಪಟ್ಟಣದ ಶ್ರೀ ಶಾಂತೇರಿ ಕಾಮಾಕ್ಷೀ ದೇವಾಲಯದಲ್ಲಿ ಚಾತುರ್ಮಾಸ್ಯ ವೃತ ಕೈಗೊಂಡಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಂಗ್ಯೋ ಕಂಪೆನಿಯ ಎರಡು ಹೊಸ ಸಿಹಿ ಮಿಠಾಯಿ ಬಿಡುಗಡೆ ಮಾಡಿದರು.
ರಾಜ್ಯ ಹಾಗೂ ಹೊರ ರಾಜ್ಯದಲ್ಲಿಯೂ ತನ್ನ ವಿವಿಧ ರುಚಿಕರ ಐಸ್‌ಕ್ರೀಂನಿಂದ ಮನೆಮಾತಾಗಿರುವ ಹಾಂಗ್ಯೋ ಐಸ್‌ಕ್ರೀಂ ಕಂಪೆನಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೊಸದಾದ ಮಲಾಯಿ ಚಿಕ್ಕಿ ಹಾಗೂ ಕರದಂಟ್ ಎಂಬ ಎರಡು ಸಿಹಿ ಮಿಠಾಯಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದೆ.
ನಾವು ಉತ್ತಮ ಗುಣಮಟ್ಟದ ಶುಚಿ-ರುಚಿಯಾದ ವಿವಿಧ ಐಸ್‌ಕ್ರೀಂಗಳನ್ನು 8 ರಾಜ್ಯಗಳ ಜನತೆಗೆ ಪರಿಚಯಿಸಿದ್ದೇವೆ. ಅದನ್ನು ಗ್ರಾಹಕರೂ ಒಪ್ಪಿದ್ದಾರೆ. ಈಗ ಎರಡು ರೀತಿಯ ಹಾಂಗ್ಯೋ ಮಿಠಾಯಿ ನಮ್ಮ ಸ್ವಾಮೀಜಿಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಿಸಿದ್ದೇವೆ. ಗ್ರಾಹಕರು ನಮ್ಮ ಹಾಂಗ್ಯೋ ಮಿಠಾಯಿಗಳಿಗೂ ಸಹಕಾರ ನೀಡಿ ಹಬ್ಬವನ್ನು ಸಿಹಿಯೊಂದಿಗೆ ಆಚರಿಸುವಂತಾಗಲಿ.
ಪ್ರದೀಪ ಜಿ ಪೈ, ಹಾಂಗ್ಯೋ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ
ಸಂದರ್ಭದಲ್ಲಿ ಹಾಂಗ್ಯೋ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ ಆರ್ ಪೈ, ಯೋಗೀಶ್ ಕಾಮತ್, ರಾಖೇಶ ಕಾಮತ್ ಉಪಸ್ಥಿತರಿದ್ದರು.