ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದೇನು.?

ಧಾರವಾಡ: ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದ ಕುರಿತಂತೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸ್ವಾಮಿಜಿ ವಿರುದ್ಧ ಕೇಸ್ ಆಗಿದೆ. ಅದರ ತನಿಖೆ ನಡೆಯುತ್ತಿದೆ. ಹೀಗಾಗಿ ಹೆಚ್ಚು ಮಾತನಾಡುವ ಅಗತ್ಯ ಇಲ್ಲ ಎಂದರು. ಅವರು ನಾಡಿನ ಒಬ್ಬ ಪ್ರತಿಷ್ಠಿತ ಸ್ವಾಮೀಜಿ, ಸೂಕ್ತವಾದ, ನ್ಯಾಯಯುತವಾದ ತನಿಖೆಯಾಗಲಿ. ಅಲ್ಲಿಯವರೆಗೆ ಎಲ್ಲದ್ದಕ್ಕೂ ಪ್ರತಿಕ್ರಿಯೆ ಕೊಡಬೇಕಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಗುಲಾಬ್ ನಬಿ ಆಜಾದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ವಿಚಾರವಾಗಿಯೂ ಮಾತನಾಡಿದ ಅವರು ಈಗಾಗಲೇ ಅನೇಕ ಹಿರಿಯರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ದುರಂಹಕಾರದ ಪರಮಾವಧಿಯೇ ಇದಕ್ಕೆ ಕಾರಣ ಎಂದರು. ಆಯಾ ನಾಯಕತ್ವದ ಅವಧಿ ಮುಗಿದಾಗ ಬಿಟ್ಟು ಕೊಡಬೇಕು, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅದು ಆಗುತ್ತಿಲ್ಲ ಆ ಕಾರಣದಿಂದಾಗಿ ಗಲಾಂ ನಬಿ ಆಜಾದ ಪಕ್ಷ ಬಿಟ್ಟಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾಗುತ್ತಾರೆಂಬ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಸಚಿವರು, ಬದಲಾವಣೆ ಆಗಲಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಸಾಮಾನ್ಯವಾಗಿ ಮೂರು ವರ್ಷ ಅವಧಿ ನಮ್ಮಲ್ಲಿದೆ. ಆದರೆ ಮೂರು ವರ್ಷದ ಬಳಿಕ ಬದಲಾವಣೆ ಮಾಡಲೇಬೇಕು ಅಂತಿಲ್ಲ. ಪಕ್ಷದಲ್ಲಿ ಆ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದರು.