ದಾಂಡೇಲಿ : ಮಹಿಳೆ ಜಗತ್ತಿನ ಮೊದಲ ಗುಲಾಮಳು. ಜಗತ್ತಿನ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಬಿಡುಗಡೆ ಮತ್ತು ಸಮಾನತೆ ಇನ್ನು ದೊರೆತಿಲ್ಲ ಎನ್ನುವುದು ವಾಸ್ತಾವಿಕ. ಮಹಿಳಾ ಸಮಾನತೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ನಗರದ ಅಂಬೇವಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಎಸ್.ವಿ.ಚಿಂಚಣಿಯವರು ಅಭಿಪ್ರಯಿಸಿದರು.
ಅವರು ಇಂದು ಶನಿವಾರ ನಗರದ ಅಂಬೇವಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಘದ ಆಶ್ರಯದಡಿ ಡಾ.ವಿನಯಾ.ಜಿ.ನಾಯಕ ಅವರ ನಿರ್ದೇಶನದಲ್ಲಿ ಆರಂಭವಾದ ಮಹಿಳಾ ಅಧ್ಯಯನ ಸರ್ಟಿಫಿಕೆಟ್ ಕೋರ್ಸನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಅವರು ಲಿಂಗ ಸೂಕ್ಷ್ಮ ದೃಷ್ಟಿಕೋನ ಎಲ್ಲರಿಗೂ ಸಾಧ್ಯವಾಗಬೇಕು. ಆಗ ಮಾತ್ರ ಸಮಾಜ ನಿರ್ಮಾಣವಾಗುತ್ತದೆ. ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ.ಬಿ.ಎನ್.ಅಕ್ಕಿ, ಡಾ.ಎನ್.ಎಂ.ಜಂಗೂಬಾಯಿ, ಪ್ರೊ.ತಸ್ಲೀಮಾ ಜೋರುಂ, ಉಷಾ ನಾಯಕ, ಬಸವರಾಜ ಮೊದಲಾದವರು ಉಪಸ್ಥಿತರಿದ್ದರು.